ನನ್ನೊಳಗಿನ ಅವಳು!? ಹೇಳಲಾಗದು ನನ್ನೊಳಗಿನ ಅವಳ ಮೋಡಿ ಮೌನವಾದರೆ ಸಾಕು ಮಾತಿನ ಮಳೆಗರೆವಳು ಏಕಾಂಗಿಯಾಗಿರಲು ಥಟ್ಟನೆ ಪ್ರತ್ಯಕ್ಷ ಆಗುವಳು ಒಳ್ಳೆ ಜೊತೆಗಾತಿ ನನ್ನೊಳಗಿನ ಅವಳು ನಗುವಾಗ ನಾನು, ಸಂತಸ ಪಡುವಳು ಅವಳು ದುಃಖ ಆವರಿಸಿದಾಗ ಸಂತೈಸುವ ಹೃದಯದವಳು ಆಗದೆಂದು ಕೈಕಟ್ಟಿ ಕುಳಿತರೆ ವ್ಯಂಗ್ಯ ಮಾಡುವಳು ಒಳ್ಳೆಯ ಸ್ಫೂರ್ತಿಯ ಚಿಲುಮೆ ನನ್ನೊಳಗಿನ ಅವಳು ಸೋತಾಗ ಗೆಲುವಿನ ಹಾದಿಗಳ ತೋರುವ ಗುರು ಗೆದ್ದಾಗ ಅಹಂಕಾರ ಬಾರದಂತೆ ಎಚ್ಚರಿಸುವ ಧ್ಯಾನಿ ಸಲ್ಲದ ಮೋಹ ಪಾಶದಲಿ ಸಿಲುಕದಂತೆ ಹಿಡಿವ ಯೋಗಿ ಅಜ್ಞಾನದ ಕೊಳೆಯಿಂದ […]
