ನವರಾತ್ರಿ ನವರಾತ್ರಿಯು ನಮ್ಮ ಭಾರತದಲ್ಲಿ ಎಲ್ಲ ಕಡೆಗೂ ಆಚರಿಸುವಂಥ ಹಬ್ಬ. ಕೆಲವರು ವೆಂಕಟೇಶ ದೇವರ ಮದುವೆಯ ಒಂಬತ್ತು ದಿನಗಳ ಸಂಭ್ರಮವನ್ನು ನವರಾತ್ರಿಯ ಹೆಸರಿನಲ್ಲಿ ಆಚರಿಸುತ್ತಾರೆ. ಘಟಸ್ಥಾಪನೆ ಮಾಡಿ, ತುಪ್ಪ ಹಾಗೂ ಎಣ್ಣೆಯ ಎರಡು ನಂದಾದೀಪಗಳನ್ನು ಒಂಬತ್ತು ದಿನಗಳ ವರೆಗೂ ಸತತವಾಗಿ ಉರಿಸುತ್ತಾರೆ. ಐದನೆಯ ದಿನದಿಂದ ಪುಸ್ತಕ ಪೂಜೆ ಎಂದು ಆಚರಿಸುತ್ತಾರೆ. ಮುಂದೆ ಅಷ್ಟಮಿಯಂದು ದುರ್ಗೆಯ ರೂಪವನ್ನು ಪೂಜಿಸಿದರೆ, ನವಮಿಯಂದು ಮಹಾನವಮಿ ಎಂದೂ, ದಶಮಿಯಂದು ವಿಜಯದಶಮಿಯಾಗಿಯೂ ಆಚರಿಸುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ಮುಖ್ಯವಾಗಿ ಬಂಗಾಲದಲ್ಲಿ ದುರ್ಗಾ ಪೂಜೆಯ ಹೆಸರಿನಲ್ಲಿ […]
