ನೂರೊಂದು ನೆನಪು ಎದೆಯಾಳದಿಂದ… ” ನನಗೆ ಸಾವಿನ ಅಂಜಿಕೆ ಇಲ್ಲ. ಏಕೆಂದರೆ ನಾನು ‘ಇರುವ’-ವರೆಗೂ ಅದು ಬರುವದಿಲ್ಲ, ‘ಅದು’ ಬಂದಾಗ ನಾನೇ ಇರುವದಿಲ್ಲ- ಹೀಗೆಂದವರು ನಮ್ಮ ಧಾರವಾಡ ನೆಲದ ಕವಿ ದ.ರಾ ಬೇಂದ್ರೆಯವರು.ಇದು ಪ್ರತಿಯೊಬ್ಬರ ವಿಷಯದಲ್ಲಿ ನಿಜವಾದರೂ ಅದರ ಪ್ರತ್ಯಕ್ಷ ಅನುಷ್ಠಾನ ಅಷ್ಟು ಸರಳವಲ್ಲ. ಇನ್ನು ‘ಚುಟುಕು ಬ್ರಮ್ಹ ‘ದಿನಕರ ದೇಸಾಯಿಯವರ ನಿಲುವು ಇದಕ್ಕಿಂತ ಕೊಂಚ ಭಿನ್ನ. ಜೀವಂತವಿದ್ದಾಗ ಸ್ವಾರ್ಥಮಾತ್ರದಿಂದ ವ್ಯರ್ಥವಾಗಿರಬಹುದಾದ ಬದುಕನ್ನು ಸಾವಿನ ತದನಂತರವಾದರೂ ಧನ್ಯವಾಗಿಸುವ ಪರಿಯದು.’ ದೇಹದ ಬೂದಿಯನ್ನು ಗಾಳಿಯಲ್ಲಿ ತೂರಿಬಿಟ್ಟು ಭತ್ತ […]
