ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ -೧ ಸಾರ್ವಕಾಲಿಕವಾದ ಭಗವದ್ಗೀತೆಯು ನಮ್ಮ ಇಂದಿನ ಜೀವನಕ್ಕೆ ಯಾವ ರೀತಿಯಲ್ಲಿ ಅನ್ವಯವಾಗುತ್ತದೆ ಎನ್ನುವುದನ್ನೂ ಅರಿತೆವು. ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ವಿವಿಧ ಧರ್ಮಗಳು ಸಾಹಿತ್ಯಿಕವಾಗಿಯೂ ವಿವಿಧ ಶತಮಾನಗಳನ್ನು ಆವರಿಸಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹತ್ತನೆಯ ಶತಮಾನವು ಜೈನ ಕವಿಗಳ ಕಾಲದ ಪ್ರಾರಂಭ. ಪಂಪನನ್ನು ಆದಿಕವಿ ಎಂದು ಹೇಳುತ್ತಾರೆ. ‘ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಹೇಳಿದ ಪಂಪನು ಕನ್ನಡದ ಆದಿ ಕವಿ. ಸರ್ವ ಕಾಲಕ್ಕೂ ಶ್ರೇಷ್ಠನೆನಿಸಿದ ಮಹಾಕವಿ ಪಂಪನನ್ನು ಅರಿಯದ […]
