ಪೆಟ್ಲು ಎಂಬ ಆಟಿಕೆ ಗ್ರಾಮೀಣ ಮನರಂಜನೆಯ ಆಟಿಕೆಗಳಲ್ಲಿ ‘ಪೆಟ್ಲು’ಎಂಬ ಆಟದ ಸಾಮಾನು ಮಕ್ಕಳಿಗೆ ಬಹಳ ಖುಷಿ ಕೊಡುವ ಒಂದು ಪರಿಕರ. ಒಂದು ಅಡಿ ಉದ್ದ, ನಾಲ್ಕು, ನಾಲ್ಕೂವರೆ ಇಂಚು ವ್ಯಾಸದ ಚಿಕ್ಕ ಬಿದಿರು ಅಚಿಡಿಯಿಂದ ತಯಾರಾಗುವ ಪೆಟ್ಲು ಒಂದು ರೀತಿಯಲ್ಲಿ ಬಂದೂಕಿನಂತೆ ಕೆಲಸ ಮಾಡುತ್ತದೆ. ಇದರಲ್ಲಿ ಎರಡು ಭಾಗಗಳಿರುತ್ತವೆ. ಒಂದು, ಬಿದಿರಿನ ಕೊಳವೆಯ ಭಾಗ, ಮತ್ತೊಂದು, ಮರದಿಂದ ತಯಾರಾದ ಜಗ ಎಂದು ಕರೆಯುವ, ಒಂದು ತೆಳುವಾದ ಕಡ್ಡಿ. ಇದಕ್ಕೆ ಹಿಡಿಕೆಯನ್ನು ಅಳವಡಿಸಿರುತ್ತಾರೆ. ಮೊದಲು ಬಿದಿರಿನ ಕೊಳವೆಯ ಮುಂಭಾಗದಲ್ಲಿ […]
