Your Cart

Need help? Call +91 9535015489

📖 Print books shipping available only in India. ✈ Flat rate shipping

ಹೋಳಿ ಹಬ್ಬ

ಹೋಳಿ ಸಂತಸದ ಹಬ್ಬ ಹೋಳಿ ಹಬ್ಬ ಜಾತಿ ಮತ ಭೇದವರಿಯದ ಹಬ್ಬ ಸಮಾನತೆಯ ಸಾರುವ ಹಬ್ಬ ಪ್ರೀತಿ ಪ್ರೇಮದಲಿ ಬೆರೆಯುವ ಹಬ್ಬ ಲೋಭ ಮೋಹವನು ಸುಡುವ ಹಬ್ಬ ಜ್ಞಾನದ ಹಣತೆ ಹಚ್ಚುವ ಹಬ್ಬ ಸಮರಸವೇ ಜೀವನ ಎನ್ನುವ ಹಬ್ಬ ಸಿರಿತನ ಬಡತನ ಮರೆಸುವ ಹಬ್ಬ ಕೂಡಿ ಆಡಿ ಬಣ್ಣಗಳ ಎರಚುವ ಹಬ್ಬ ಶಾಂತಿ ಮಂತ್ರವ ಹೇಳುವ ಹಬ್ಬ ಆಡಂಬರ ವಿಲ್ಲದ ಸುಂದರ ಹಬ್ಬ ಹಿರಿಯರು ಕಿರಿಯರು ಕೂಡಿ ನಲಿಯುವ ಹಬ್ಬ ದಡ ಬಡ ಹಲಗಿ ಬಾರಿಸೋ ಹಬ್ಬ […]

ಸಹಜ ಕೃಷಿ

ಸಹಜ ಕೃಷಿ….! ಬದುಕಿಗೂ…. ಭೂಮಿಗೂ….!! ಇಳೆಗೂ… ಇಹಕ್ಕೂ….!! ಸಹಜ ಕೃಷಿ…! ಭೂಮಿ ಬಗೆಯುತ್ತಾ ಹೋದಂತೆ ನೇಗಿಲು ಆಳದಿಂದ ಮೇಲೆದ್ದ ಮಣ್ಣು ಎರೆಡೂ ಬದಿಗೆ ಹೊರಳಿ ಹೊರ ವಾತಾವರಣಕ್ಕೆ ಅನಾವರಣಗೊಳ್ಳುತ್ತಾ, ಹೊಸ ಚೇತನದ ನಿರ್ಮಿತಿಗೆ ಜೀವ ತಳೆವಂತೆ, ಬಯಕೆಗಳೇ ಬಲೆಯಾಗಿ ಬಿಗಿಗೊಂಡ ಮನವನುತ್ತುತ್ತ ಅಷ್ಟಷ್ಟೇ ಉತ್ಸಾಹ, ಸ್ಪೂರ್ತಿ, ನಂಬಿಕೆ, ಕನಸುಗಳ ಬೀಜಬಿತ್ತಿ ದಿಗಿಲು, ಹಠ, ಗೊಂದಲ, ನಿರಾಶಾಭಾವಗಳ ಕಳೆಕಿತ್ತು ಮನದ ತಿಳಿ-ಬಿಳಿಯ ಕಳೆಯದೇ ಭಾವನಾತ್ಮಕ ಸೆಲೆ ಚಿಮ್ಮುವ ನೈಸರ್ಗಿಕ ಕೃಷಿಯು ಒಡಮೂಡಿ ಬರಲಿ…! -ಹೊಸ್ಮನೆ ಮುತ್ತು.

ಚುಟುಕುಗಳು

ಚುಟುಕುಗಳು 1.ಪ್ರೇಮಿಗಳಿಬ್ಬರು ಒಲುಮೆಯಲಿ ವಿಶಾಲ ಸಾಗರ ನಡೆದಿದೆ ಮೌನ ಸಂಭಾಷಣೆಗಳ ಮಹಾಪೂರ ಅಗಲಿ ಇರಲಾರದ ಸಿಹಿ ಸಂಕಟಗಳ ಅಬ್ಬರ ಆತ್ಮಗಳ ಮಧುರ ಮಿಲನದ ಶೃಂಗಾರ 2.ಅಂಬರದಲಿ ರಥವೇರಿದ ಹೊಂಗಿರಣದ ಸೂರ್ಯ ಇದುವೇ ಋತುಮಾನದ ಪಲ್ಲಟದ ಕಾರ್ಯ ಕಳೆದು ಮೈಚಳಿ ತಂಡಿಹ ಬಿಸಿ ಝಳದ ಸಾರ ಹೊಂದಾಣಿಕೆಯೇ ಮನುಜನ ನೈಜ ಕಾಯ 3. ಸಿರಿತನವೆನಿತು ಕರುಣಿಸುವುದು ಹೃದಯನಂದ ಬಡತನದಲ್ಲೂ ಒಲವ ಉಂಡವನೆ ಆತ್ಮಾನಂದ. ಬೇಕಿಲ್ಲ ಹಣದ ದರ್ಪ ಹಸಿವ ನೀಗಿಸಲು ನೈಜ ನಡೆ ನುಡಿ ಒಂದೇ ಸಾಕು ಬದುಕಲು […]

ನಿನ್ನೊಲುಮೆಯ ಪ್ರೇಮದ ರಥದಲ್ಲಿ

ನಿನ್ನೊಲುಮೆಯ ಪ್ರೇಮದ ರಥದಲ್ಲಿ ಮಹಾರಾಣಿ ನಾನು.. ಸಾರೋಟ ನೀನು ನಿನ್ನ ವಿಶಾಲ ಹೃದಯದ ನೀಲ ಅಂಬರದಲ್ಲಿ ಮಲ್ಲಿಗೆಯಂತೆ ಚೆಲ್ಲಿಹ ಮಿನುಗು ತಾರೆ ನಾನು ನೀ ಶ್ವೇತ ಕುದುರೆಯಂತೆ ಓಡುವ ಮೋಡವಾಗಿರಲು ನಾಚಿ ನೀರಾಗಿ ಮರೆಯಾಗುವ ಹುಣ್ಣಿಮೆ ಚಂದಿರ ನಾನು ನಿನ್ನ ಸರಸವೆಲ್ಲ ರವಿಯ ಎಳೆಯ ಕಿರಣಗಳಲ್ಲಿ ನನ್ನ ಸಮ್ಮತಿಯೆಲ್ಲ ನೀ ಚೆಲ್ಲಿದ ಸ್ವರ್ಣ ರಂಗಿನಲ್ಲಿ ಅಜಾನು ಬಾಹುವಂತೆ ಪಸರಿಸಿದ ವೃಕ್ಷ ನೀನಾದಲ್ಲಿ ಸುಗಂಧ ಪುಷ್ಪದಿಂದ ಬಳಸಿನಿಂತ ಲತೆಯು ನಾನಿಲ್ಲಿ ಕೈಬೀಸಿ ಕರೆಯುವ ಕಡಲ ತೆರೆಯು ನೀನಾದಲ್ಲಿ ತವಕದಿ […]