ಪ್ರಶಸ್ತಿ ‘ಕಲರ್ಸ್’ ಟಿ.ವಿ. ಚಾನೆಲ್ ನಲ್ಲಿ ಬಿತ್ತರಗೊಳ್ಳುತ್ತಿರುವ ‘ಬಿಗ ಬಾಸ್’ನ್ನು ಅದೇಕ ಚಿತ್ತದಿಂದ ನೋಡುವುದರಲ್ಲಿ ತಲ್ಲೀನನಾಗಿದ್ದೆ. ಫೋನು ರಿಂಗಣಿಸಿತು. ಆನಂದಕ್ಕೆ ಸೂಜಿ ಚುಚ್ಚಿದ ಬಲೂನಿನಂತೆನಿಸಿತು. ಯಾವುದೇ ಒಂದು ನಮಗಿಷ್ಟವಾದ ಪ್ರೋಗ್ರ್ಯಾಂ ನೋಡುತ್ತಿರುವಾಗ ಅಡೆತಡೆಯಾದರೆ ಮನಸ್ಸಿಗೆ ಒಂಥರ ಪಿಚ್ಚೆನಿಸುತ್ತದೆ. ಬೇಸರದಿಂದಲೇ ಫೋನೆತ್ತಿದೆ. ಅತ್ತ ಕಡೆಯಿಂದ ಅಪರಿಚಿತ ಪುರುಷ ಧ್ವನಿ! ‘ಹಲೋ’ ಎಂದೆ. ಅತ್ತ ಕಡೆಯಿಂದ ‘ದೀಪಿಕಾ ಅವರಿದ್ದಾರೆಯೇ’ ಎಂದಾಗ ‘ಹೌದು, ನಾನೇ ಮಾತನಾಡುವುದು ಏನಾಗಬೇಕಿತ್ತು?’ ಎಂದೆ ಮುಗುಮ್ಮಾಗೆ. ‘ನಿಮಗೆ ಒಂದು ಪ್ರಶಸ್ತಿ ಬಂದಿದೆ’ ಎನ್ನಬೇಕೆ. ನಾನು ದಿಗ್ಭ್ರಾಂತಳಾಗಿ ಹೋದೆ. […]
