Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಸಂಗೀತ ಕಾರ್ಯಕ್ರಮ

ಸಂಗೀತ ಕಾರ್ಯಕ್ರಮ
ವಿದ್ವಾನ್ ಪಂಡಿತ್ ಶೇಷಗಿರಿ ದಂಡಾಪುರ್, ಧಾರವಾಡ ಮತ್ತು ವಿದೂಷಿ ಯಶಸ್ವಿ ಶರಪೋತದಾರ್ ಸಾಠೆ, ಪುಣೆ ಇವರ ಶಿಷ್ಯೆಯಾದ ” ಕುಮಾರಿ ಸೌದಾಮಿನಿ ದೇಸಾಯಿ” ಇವರಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಿ.

ತಬಲಾ ಸಾಥ್ – ಶ್ರೀ. ಗಜಾನನ ಹೆಗಡೆ, ಗಿಳಿಗುಂಡಿ ಮತ್ತು ಪಂಡಿತ್ ರಾಮದಾಸ್ ಪಲ್ಸುಲೆ, ಪುಣೆ ಇವರ ಶಿಷ್ಯನಾದ ಕುಮಾರ. ಶಮಂತ ದೇಸಾಯಿ
ಹಾರ್ಮೋನಿಯಂ ಸಾಥ್ – ಪಂಡಿತ್ ಪ್ರಮೋದ್ ಮರಾಠೆ, ಪುಣೆ ಇವರ ಶಿಷ್ಯನಾದ ಕುಮಾರ. ರಿಷಭ ಹಾನಗಲ

ಕಲಬುರ್ಗಿಯವರ ಜೀವನ ಮತ್ತು ಸಾಧನೆ ಒಂದು ನೆನಪು

ಕಲಬುರ್ಗಿಯವರ ಜೀವನ ಮತ್ತು ಸಾಧನೆ ಒಂದು ನೆನಪು
ಡಾ. ಎಂ. ಎಂ ಕಲಬುರ್ಗಿ ಯವರ ಜನ್ಮದಿನದ ನಿಮಿತ್ತ ಅವರ ಜೀವನದ ಮತ್ತು ಅವರ ಸಾಧನೆಗಳ ಕುರಿತು ಒಂದಿಷ್ಟು ನೆನಪುಗಳನ್ನು ನಮ್ಮೊಡನೆ ಹಂಚಿಕೊಳ್ಳಲಿದ್ದಾರೆ ಡಾ. ಬಾಲಣ್ಣ ಶೀಗೀಹಳ್ಳಿ ಅವರು.

ತಬಲಾ ಕಾರ್ಯಕ್ರಮ

ತಬಲಾ ಕಾರ್ಯಕ್ರಮ
ತಬಲಾ ವಾದನ ಮಾಡುತ್ತಿರುವವರು, ಶ್ರೀ. ಗಜಾನನ ಹೆಗಡೆ, ಗಿಳಿಗುಂಡಿ ಮತ್ತು ಪಂ. ರಾಮದಾಸ ಪುಲ್ಸುಲೆ, ಪುಣೆ ಇವರ ಶಿಷ್ಯನಾದ
ಕು. ಶಮಂತ ದೇಸಾಯಿ

ಹಾರ್ಮೋನಿಯಂ ನಲ್ಲಿ ಸಾಥ್ ನೀಡುತ್ತಿರುವವರು ಪಂ . ಪ್ರಮೋದ್ ಮರತೇ, ಪುಣೆ ಇವರ ಶೇಷ್ಯನಾದ
ಕು. ರಿಷಭ್ ಹಾನಗಲ್

ವಚನ ಕಾರ್ಯಕ್ರಮ

ವಚನ ಕಾರ್ಯಕ್ರಮ
ವಾಚನಕಾರಾರು : ಡಾ. ತಮಿಳ್ ಸೆಲ್ವಿ – ಕನ್ನಡ ವಿಭಾಗದ ಮುಖ್ಯಸ್ಥರು, ಮದ್ರಾಸ್ ವಿಶ್ವವಿದ್ಯಾಲಯ

ಧಾರವಾಡ ಸಾಹಿತ್ಯ ಸಂಭ್ರಮ 2018 “ಪ್ರಸಂಗಗಳು”

ಧಾರವಾಡ ಸಾಹಿತ್ಯ ಸಂಭ್ರಮ 2018 “ಪ್ರಸಂಗಗಳು”
ಭಾಗವಹಿಸಿದವರು
ಸಿ ಯು ಬೆಳ್ಳಕ್ಕಿ
ಸುಮಂಗಲ
ಬಿ. ಜಯಶ್ರೀ
ಐ ಜಿ. ಸನದಿ
ಮಂಡ್ಯ ರಮೇಶ್
ಎಂ ಕೃಷ್ಣೇಗೌಡ

ನಿರ್ದೇಶನ
ಸ್ವಾಮಿರಾವ್ ಕುಲಕರ್ಣಿ

ನಗುWAY ಜೀವನದ ಹಾದಿ

ನಗುWAY ಜೀವನದ ಹಾದಿ
ನಮ್ಮೊಡನೆ: ಶ್ರೀ. ಬೇಲೂರು ರಾಮಮೂರ್ತಿ – ಖ್ಯಾತ ಹಾಸ್ಯ ಬರಹಗಾರರು

ಕನ್ನಡ ಮತ್ತು ಡಬ್ಬಿಂಗ್

ಡಬ್ಬಿಂಗ್ ಅನ್ನುವುದೀಗ ಅನಿವಾರ್ಯ ವಾಸ್ತವ. ಅದು ಬೇಡ ಅನ್ನುವುದು, ಅಯ್ಯೊ ಡಬ್ಬಿಂಗಿನಿಂದ ಅನಾಹುತವಾಗಿಬಿಡುತ್ತದೆ ಅಂತ ಹೌಹಾರುವುದು, ಎರಡೂ ನಿರರ್ಥಕ. ಹಾಗಾಗಿ, ಡಬ್ಬಿಂಗಿನ ವಾಸ್ತವಕ್ಕೆ ತೆರೆದುಕೊಳ್ಳುತ್ತಾ ಅದನ್ನು ಹೇಗೆ ಭಾಷೆಯ ಬೆಳವಣಿಗೆಗೆ ಮತ್ತು ಒಟ್ಟಾರೆ ದೃಶ್ಯಮಾಧ್ಯಮದ ಗುಣಮಟ್ಟ ಸುಧಾರಣೆಗೆ ದುಡಿಸಿಕೊಳ್ಳಬಹುದು, ಮತ್ತು ಅದಕ್ಕಿರುವ ಸವಾಲುಗಳೇನು ಅನ್ನುವುದರ ಬಗ್ಗೆ ಚಿಂತಿಸುವುದು ಒಳ್ಳೆಯದು. ಆ ದಿಕ್ಕಿನಲ್ಲಿ ಒಂದು ಪ್ರಯತ್ನ ಇದು. ಆದಷ್ಟೂ ಸಂವಾದದ ರೀತಿಯಲ್ಲಿರಬೇಕು ಅನ್ನುವುದು ಆಶಯ; ಹಾಗಾಗಿ ಇಲ್ಲಿ ಮೊದಲು ಮಾತಾಡುವುದು ಅನಂತ ಚಿನಿವಾರ್ ಅವರೇ ಆದರೂ, ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಲು ಮುಂದೆ ಬಂದು, ಡಬ್ಬಿಂಗಿನ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾದರೆ ಮಾತುಕತೆ ಅರ್ಥಪೂರ್ಣವಾಗುತ್ತದೆ…

ನಮ್ಮೊಡನೆ: ಶ್ರೀ ಅನಂತ ಚಿನಿವಾರ

ಅಭಿನಯ ಭಾರತಿ ಮಧುರ ವರ್ಷಗಳು

ಅಭಿನಯ ಭಾರತಿ ಮಧುರ ವರ್ಷಗಳು
ಕನ್ನಡ ರಂಗಭೂಮಿಯ ಚಟುವಟಿಕೆಯನ್ನು ಮಾಡುತ್ತ, ಉತ್ತರ ಕರ್ನಾಟಕದ ಜನಮಾನಸದಲ್ಲಿ ಅಚ್ಚಳಿಯದೆ ಮೂಡಿರುವಂತಹ, ಪ್ರತಿಭೆಗಳನ್ನು ಹುಟ್ಟುಹಾಕಿರುವಂತಹ ಸಂಸ್ಥೆ “ಅಭಿನಯಭಾರತಿ”. ಇದರ ೪೦ ವರ್ಷಗಳ ಪಯಣದ ಕುರಿತ ಮಾತುಗಳು.

ಮಾತನಾಡುವವರು : ಶ್ರೀ. ಅರವಿಂದ ಕುಲಕರ್ಣಿ

ಹಾಸ್ಯ ಸಂಜೆ

ಹಾಸ್ಯ ಸಂಜೆ
ಪ್ರಸ್ತುತಿ :

ಶ್ರೀ. ಅಶೋಕ ಜೋಶಿ

ಜೀವನದಲ್ಲಿ ಬರುವ ಹಲವಾರು ಪ್ರಸಂಗಗಳನ್ನು ಹಾಸ್ಯ ಪ್ರೌರುತ್ತಿಯಿಂದ ನೋಡಿದಾಗ ಸಿಗುವ ಆನಂದವನ್ನು ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಕೊಡಲು ಪ್ರಯತ್ನಿಸಿದ್ದಾರೆ.