Need help? Call +91 9535015489

📖 Print books shipping available only in India. ✈ Flat rate shipping

ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೪

ಕಾರ್ಯಕ್ರಮ : ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೪
ನಮ್ಮೊಡನೆ: ಸತ್ಯೇಶ್ ಬೆಳ್ಳೂರ್
ದಿನಾಂಕ: ೧೫ ಆಗಸ್ಟ್ ೨೦೨೦ (15 August 2020)
ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನಗಳಲ್ಲಿಯೂ ಬಂದು ಹೋಗಿದ್ದಾರೆ. ತಮ್ಮ ಜೀವಿತದ ಅವಧಿಯಲ್ಲಿ ತಮಗೆ ಪ್ರೇರಣಾದಾಯಕವೆನಿಸಿದ ವ್ಯಕ್ತಿಚಿತ್ರಣಗಳನ್ನು ಸನ್ಮಾನ್ಯ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ ಎಂಬ ಎಂಟು ಸಂಪುಟಗಳ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೇ ಈ ಉಪನ್ಯಾಸದ ಉದ್ದೇಶ.

ಮರೆಯಲಾಗದ ಸಾಹಿತ್ಯದ ವ್ಯಕ್ತಿತ್ವ – ಹುಯಿಲಗೋಳ ನಾರಾಯಣರಾವ್

ಹುಯಿಲಗೋಳ ನಾರಾಯಣರಾವ್ ಎಂದ ಕೂಡಲೇ ನೆನಪಾಗುವುದು “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಕನ್ನಡ ನಾಡಗೀತೆ. ಸ್ವಾತಂತ್ರ ಹೋರಾಟಗಾರರು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದ ವ್ಯಕ್ತಿತ್ವ ಇವರದು,
“ಮರೆಯಲಾಗದ ಸಾಹಿತ್ಯದ ವ್ಯಕ್ತಿತ್ವ” ಈ ಸರಣಿಯ ನೇರ ಪ್ರಸಾರದಲ್ಲಿ “ಹುಯಿಲಗೋಳ ನಾರಾಯಣರಾವ್” ಅವರ ಕುರಿತು ಶ್ರೀ. ಹರ್ಷ ಡಂಬಲ್ ಅವರು ಮಾತನಾಡುತ್ತಾರೆ.

ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೩

ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನಗಳಲ್ಲಿಯೂ ಬಂದು ಹೋಗಿದ್ದಾರೆ. ತಮ್ಮ ಜೀವಿತದ ಅವಧಿಯಲ್ಲಿ ತಮಗೆ ಪ್ರೇರಣಾದಾಯಕವೆನಿಸಿದ ವ್ಯಕ್ತಿಚಿತ್ರಣಗಳನ್ನು ಸನ್ಮಾನ್ಯ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ ಎಂಬ ಎಂಟು ಸಂಪುಟಗಳ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೇ ಈ ಉಪನ್ಯಾಸದ ಉದ್ದೇಶ.

‘ಮಧ್ಯಘಟ್ಟ ‘ ಕಾದಂಬರಿ – ಸಾಹಿತ್ಯ ಪ್ರಕಾಶನದ ಪುಸ್ತಕ ಲೋಕಾರ್ಪಣೆ

ಕಾರ್ಯಕ್ರಮ : ‘ಮಧ್ಯಘಟ್ಟ ‘ ಕಾದಂಬರಿ – ಸಾಹಿತ್ಯ ಪ್ರಕಾಶನದ ಪುಸ್ತಕ ಲೋಕಾರ್ಪಣೆ
ದಿನಾಂಕ : ೦೫. ೦೮. ೨೦೨೦ ರಂದು
ಸಮಯ : ಮಧ್ಯಾಹ್ನ ೧೨:೦೦ ಗಂಟೆಗೆ

ಹೆಸರಾಂತ ಬರಹಗಾರ , ಪರಿಸರ -ಕೃಷಿ ಚಿಂತಕ ಶ್ರೀ. ಶಿವಾನಂದ ಕಳವೆ ಅವರದೊಂದು ತುಂಬಾ ಹೊಸಬಗೆಯ ಕಾದಂಬರಿ ‘ಮಧ್ಯಘಟ್ಟ’ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಥಟ್ ಅಂತ ಹೇಳಿ – “ಅನಿವಾಸಿ ಬಳಗ” ರಸಪ್ರಶ್ನೆ ಕಾರ್ಯಕ್ರಮ – ೩

ಕನ್ನಡರಿಗಾಗಿ, ಕನ್ನಡದಲ್ಲಿ, ಕನ್ನಡದ ರಸಪ್ರಶ್ನೆ ಕಾರ್ಯಕ್ರಮ… “ಥಟ್ ಅಂತ ಹೇಳಿ”
“ಥಟ್ ಅಂತ ಹೇಳಿ” ಕ್ವಿಜ್ ಕಾರ್ಯಕ್ರಮ ಡಾ. ನಾ ಸೋಮೇಶ್ವರ್ ಅವರ ನೇತೃತ್ವದಲ್ಲಿ
ಮೊದಲ ಎರಡು  ಸುತ್ತಿನ ಕಾರ್ಯಕಮದ ಯಶಸ್ಸಿನ ನಂತರ ಮತ್ತೆ ಅನಿವಾಸಿ ಬಳಗದೊಡನೆ ಮೂರನೆಯ ಸುತ್ತಿನ ಕಾರ್ಯಕ್ರಮ, ನೋಡಲು ಸಜ್ಜಾಗಿರಿ…
ಟಿ ವಿ ಯ ಮಿತಿಯಿಂದ ಜಗತ್ತಿನ ಕನ್ನಡಿಗರಿಗೆ ತಲುಪಿಸಲು ಡಾ. ನಾ ಸೋಮೇಶ್ವರ ಅವರೊಡನೆ ಮೂಕ ಟ್ರಸ್ಟ್ ಸೇರಿಕೊಂಡು ಇದನ್ನು ಅಂತರ್ಜಾಲದ ನೇರ ಪ್ರಸಾರ ಕಾರ್ಯಕ್ರಮದಂತೆ ತರುತ್ತಿದೆ.

Facebook Live: https://www.facebook.com/vividlipi/live
Youtube Live: https://www.youtube.com/vividlipi/live

“ಹರಿದಾಸರ ೧೦೦೦೦ ಹಾಡು” ಬ್ರಹತ್ ಗ್ರಂಥ ಇ-ಪುಸ್ತಕ ಬಿಡುಗಡೆ

Event: International release of “Haridaasara 10000 Hadugalu”/ 10000 Songs collection of Haridaasaru
Event Date: 1st August 2020
Time: 6 PM IST / 1.30 PM BST
Book by: Dr. Aralumallige Parthasarathy
Release by: GBSRSB Team UK
Supported by: World Forum of Sri Vyasaraja Devotees – Michigan/New Jersey/ California – USA

೧ ಆಗಸ್ಟ್ ೨೦೨೦ ರಂದು ವಿದ್ಯಾ ವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಹರಿದಾಸರ ೧೦೦೦೦ ಹಾಡುಗಳ ಬ್ರಹತ್ ಗ್ರಂಥ ಇ-ಪುಸ್ತಕ ರೂಪದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಗ್ರೇಟ್ ಬ್ರಿಟನ್ ರಾಘವೇಂದ್ರ ಸ್ವಾಮಿ ಬೃಂದಾವನ (GBSRSB) ಅವರ ತಂಡದವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಅಂದು ಬಿಡುಗಡೆ ದಿನ ಪುಸ್ತಕ ರಿಯಾಯಿತಿ ದರದಲ್ಲಿ ಮಾರಾಟ ಕೂಡ ಮಾಡಲಾಗುತ್ತದೆ. 

ಜಿ. ಬಿ. ಜೋಶಿ : ಅಪರೂಪದ ಸೃಜನಶೀಲ ಪ್ರಕಾಶಕ

೨೯ ಜುಲೈ ೨೦೨೦ ಪದ್ಮಶ್ರೀ ಜಿ. ಬಿ. ಜೋಶಿ ಅವರ ೧೧೭ ನೆಯ ಜನ್ಮ ದಿನ, ಅಂದು ನಾವು ವಿವಿಡ್ಲಿಪಿಯ ನೇರ ಪ್ರಸಾರದಲ್ಲಿ ಅವರ ಚಿತ್ರಣ ತರುತ್ತಿದ್ದೇವೆ, ಅದರಲ್ಲಿ ಅವರನ್ನು ಹತ್ತಿರದಿಂದ ಕಂಡ ವಿವಿಧ ವ್ಯಕ್ತಿಗಳು ಅವರ ಬಗ್ಗೆ ಚರ್ಚಿಸಿದ್ದಾರೆ, ಸಾಮಾನ್ಯರಿಗೆ ಗೊತ್ತಿರುವ ಜೊತೆಗೆ ಗೊತ್ತಿರದ ವಿಷಯಗಳೂ ತುಂಬಾ ಇವೆ. ಅವರ ಬಹುಮುಖ ಪ್ರತಿಭೆ ಕೂಡ ನೀವಿಲ್ಲಿ ಕಾಣಬಹುದು.

ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೨

ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನಗಳಲ್ಲಿಯೂ ಬಂದು ಹೋಗಿದ್ದಾರೆ. ತಮ್ಮ ಜೀವಿತದ ಅವಧಿಯಲ್ಲಿ ತಮಗೆ ಪ್ರೇರಣಾದಾಯಕವೆನಿಸಿದ ವ್ಯಕ್ತಿಚಿತ್ರಣಗಳನ್ನು ಸನ್ಮಾನ್ಯ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ ಎಂಬ ಎಂಟು ಸಂಪುಟಗಳ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೇ ಈ ಉಪನ್ಯಾಸದ ಉದ್ದೇಶ.

ಜೀವಿಸಿದರೆ ಸಾಕಾ? ವಿಕಸಿಸಬೇಕಾ?

ಉದ್ಯೋಗ, ಮನೆ, ಮಕ್ಕಳು ಒಂದು ಹಂತದ ಯಶಸ್ಸು ಇಷ್ಟೆಲ್ಲ ಸಿಕ್ಕನಂತರವೂ ಮನಸ್ಸಿನಲ್ಲಿ ಏನೋ ಅತೃಪ್ತಿ, ಹೇಳಿಕೊಳ್ಳದ ಖಾಲಿತನ ” ಲೈಫು ಇಷ್ಟೇನಾ” ಎಂದು ಅನ್ನಿಸುವುದೂ ಇದೆ. ಅಷ್ಟೇ ಏಕೆ ಎಲ್ಲ ಇದ್ದೂ ಸಂತೋಷದಿಂದ ಇದ್ದೀವಾ, ಯವಾಗಲೂ, ಉತ್ಸಾಹದ ಲವಲವಿಕೆಯ, ಉತ್ಕಟವೆನ್ನಿಸುವ ಹಾಗೆ ನಮ್ಮ ಬದುಕಿದೆಯಾ? ಸಾಹಿತ್ಯ, ಕಲೆ, ಸಂಗೀತವೂ ಸೇರಿದಂತೆ ಎಲ್ಲ ಸೃಜನಶೀಲಕೃತಿಗಳೂ ಬದುಕನ್ನು ವಿಕಸನದೆಡೆಗೆ ನಡೆಸುವುದಕ್ಕೆ ನೆರವಾಗುವ ಸಂಗತಿಗಳು. ಕೇವಲ ಜೀವಿಸಿದರೆ ಸಾಕಾ? ವಿಕಸಿಸಬೇಕಾ? ಎಲ್ಲಕ್ಕಿಂತ ಮುಖ್ಯವಾಗಿ ವಿಕಸನ ನಮ್ಮದೇ ಆಯ್ಕೆ. ಹಾಗಾದರೆ ನಾವೇಕೆ ವಿಕಸಿಸಬೇಕು? ಸಾಹಿತ್ಯ, ಆಧ್ಯಾತ್ಮ, ವಿಜ್ಞಾನದ ಮೂಲಕ ವಿಕಸನದ ಅನಂತ ಸಾಧ್ಯತೆಗಳನ್ನು, ನಮ್ಮೆಲ್ಲರ ಜೀವನಕ್ಕಿರುವ ಬಹುದೊಡ್ಡ ಘನತೆಯನ್ನು ಎಲ್ಲರೂ ಒಟ್ಟಾಗಿ ಅರಿಯುವ ಕಾರ್ಯಕ್ರಮ ” ಜೀವಿಸಿದರೆ
ಸಾಕಾ ? ವಿಕಸಿಸಬೇಕಾ? “