ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೩ ಸರಕಾರದ ಪೂರ್ಣ ಗಮನವು ಯುವಜನರ ಮೂಲಕವಾಗಿ ವಿಕಾಸವನ್ನು ಸಾಧಿಸುವಂಥದಾಗಬೇಕು. ಸರಕಾರದ ಪರವಾಗಿ ಪ್ರಸ್ತುತಪಡಿಸಿದಂಥ ರಾಷ್ಟ್ರೀಯ ಯುವನೀತಿ-೨೦೧೪ ರ ಉದ್ದೇಶವು “ಯುವಕರ ಯೋಗ್ಯತೆಯನ್ನು ಗುರುತಿಸಿ ಅದಕ್ಕನುಗುಣವಾಗಿ ಅವರಿಗೆ ಅವಕಾಶಗಳನ್ನು ಒದಗಿಸಿ ಅವರನ್ನು ಬಲಿಷ್ಠಗೊಳಿಸುವ, ಮತ್ತು ಇದರ ಮೂಲಕ ನಮ್ಮ ದೇಶಕ್ಕೆ ದೊರೆಯಬೇಕಾದಂಥ ಯೋಗ್ಯ ಸ್ಥಾನವನ್ನು ಕೊಡಿಸಬೇಕಾಗಿದೆ” ಎಂಬುದು. ಯುವಕರ ವ್ಯಕ್ತಿತ್ವದಲ್ಲಿ ಸುಧಾರಣೆ ತರುವ, ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಹಾಗೂ ಅವರಲ್ಲಿ ಒಬ್ಬ ಜವಾಬ್ದಾರಿಯುತ ನಾಗರಿಕನ ಗುಣ ಹಾಗೂ ಸ್ವಯಂ ಸೇವೆಯ ಭಾವನೆಗಳನ್ನು […]
