ರೋಗವಲ್ಲದ ರೋಗ ! ನಮ್ಮ ಪಕ್ಕದ್ಮನೆ ಶಾರದಾಳಿಗೆ ಯಾವಾಗಲೂ ಎಂಥದೋ ಕೊರಗು. ತನಗೇನೋ ಆಗಿದೆ, ಆರೋಗ್ಯ ಸರಿ ಇಲ್ಲ ಎಂದು ಯಾವಾಗ್ಲೂ ನರಳುವುದೇ ಆಯಿತು. ಹೊಟ್ಟೆ ನೋವಾದರೆ ಹೊಟ್ಟೆಯಲ್ಲಿ ಗಂಟಾಗಿರಬಹುದೆಂದೂ, ತಲೆ ನೋವಾದರೆ ಬ್ರೇನ್ ಟ್ಯುಮರ್ ಆಗಿರಬಹುದೆಂದೂ ಕೆಮ್ಮು ಬಂದರೆ ಕ್ಷಯವೆಂದೂ ಅನುಮಾನ. ಯಾವಾಗಲೂ ದೊಡ್ಡ ದೊಡ್ಡ ರೋಗಗಳದೇ ಪೈಪೋಟಿ. ಹೀಗಾಗಿ ಮನೆಯಲ್ಲಿ ಎಲ್ಲರಿಗೂ ಯಾವಾಗಲೂ ಕಾಯ್ದು ಆರಿದ ನೀರು, ಔಷಧಿ ಬಾಟಲಿಗಳೂ, ಗುಳಿಗೆಗಳ ರ್ಯಾಪರ್ ಗಳದೇ ರಾಜ್ಯ, ಮುಂಜಾನೆ ಒಮ್ಮೆ ಸಂಜೆಗೆ ಒಮ್ಮೆ ಎಲ್ಲರೂ ಥರ್ಮಾಮೀಟರ್ […]
