ಸಾವು?! ಮನೆ ಅಂದರೆ ಮಕ್ಕಳು ಮಕ್ಕಳು ಅಂತಂದ್ರೆ ಮನೆ ಎನ್ನುವಂಥ ಆ ಕಾಲದಲ್ಲಿ ನಮ್ಮ ಮನೆತುಂಬಾ ಮಕ್ಕಳೇ ಮಕ್ಕಳು. ಮನೆ ಸುಮ್ಮನೇ ಮಕ್ಕಳೇ ಮನೆ ಎನ್ನುವ ಪರಿಸ್ಥಿತಿ. ಮನೆಗೆ ಬರಹೋಗುವ ಜನರ ದಂಡಿ. ಅವರ ಊಟ ತಿಂಡಿ ತೀರ್ಥಗಳೆಲ್ಲ ಇಲ್ಲೇ ಆಗಬೇಕು. ಹೀಗಾಗಿ ಅವ್ವನಿಗೆ ಮಕ್ಕಳು ಎದ್ದವೋ ಬಿದ್ದವೋ ಎಂದು ನೋಡಲೂ ಪುರಸೊತ್ತಿಲ್ಲ. ಜನಕ್ಕೆ ಮಾಡಿ ಮಾಡಿ ಉಣಿಸುವುದೊಂದೇ ಗೊತ್ತು. ಇನ್ನು ಅಪ್ಪನಿಗೆ ಕೋರ್ಟು ಕಚೇರಿ ಮನೆ ತುಂಬ ಬರುವ ಪಕ್ಷಗಾರರು. ಹೀಗಾಗಿ ಇಬ್ಬರೂ ತುಂಬ ಬ್ಯುಜಿ. […]
