ಸಾಮರಸ್ಯವನೆಂತು ಕಾಣ್ವುದೀ ವಿಷಮದಲೀ… ‘ ಅವಳು’ -ಗುಲ್ಬರ್ಗದವಳು. ಹೆಸರು ಕವಿತಾ. ಶಾಲೆಯ ಮೆಟ್ಟಿಲು ಏರಿದವಳಲ್ಲ. ಆಧಾರ ಕಾರ್ಡ್, ರೇಶನ್ ಕಾರ್ಡ್, ಮೋದಿಯವರ Zero bank account, Election Identity, ಇಂಥ ಕಾರಣಗಳಿಗಾಗಿ ಸಹಿ ಮಾಡಲು ಮೂರಕ್ಷರದ ತನ್ನ ಹೆಸರು ಬರೆಯುವದನ್ನು ಕಲಿಯಲು ಮೂರುದಿನ ತೆಗೆದುಕೊಂಡವಳು. ಕುಲ ದೀಪಕನ ಹಂಬಲ ವಿಫಲವಾಗಿ ಹುಟ್ಟಿದ ಮೂವರು ಜನ ಅಕ್ಕ ತಂಗಿಯರು, ಕೊನೆಗೊಬ್ಬ ತಮ್ಮನೊಂದಿಗೆ ತೀವ್ರ ಬಡತನದಲ್ಲಿ ಬೆಳೆದವಳು. ಎಲ್ಲ ಅಕ್ಕಂದಿರ ಮದುವೆಯಾಗುವದರಲ್ಲಿ ಇದ್ದು ಬಿದ್ದುದನ್ನೂ ಕಳೆದುಕೊಂಡ ಮೇಲೆ ಇವಳ ಹೊತ್ತಿಗೆ […]
