ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು! ಕುರುಕ್ಷೇತ್ರದ ಮಹಾ ಯುದ್ಧದಲ್ಲಿ ಅಪಾರ ಸೈನಿಕರು ಸೇನಾಧಿಪತಿಗಳು ಹಾಗೂ ಅನೇಕ ಸಾಮಂತ ರಾಜರು ಸತ್ತು ಧರೆಗುರುಳಿದ್ದರು. ಕುರುಕುಲದವರ ಶವಗಳನ್ನು ಅಂತಿಮ ಸಂಸ್ಕಾರಕ್ಕೋಸ್ಕರ ಹುಡುಕುತ್ತಿದ್ದ ಯುಧಿಷ್ಟಿರನಿಗೆ ಯುಧ್ಧದ ಭೀಭತ್ಸ ದೃಶ್ಯ ಕಂಡು ಕರುಳು ಕಿವಿಚಿದಂತಾಯಿತು. ಯುದ್ಧದಲ್ಲಿ ಭಳಕೆಯಾದ ಆನೆ, ಕುದುರೆ ಮುಂತಾದ ಪ್ರಾಣಿಗಳ ದೇಹಗಳು ಛಿದ್ರ ಛಿದ್ರವಾಗಿ ಎಲ್ಲೆಡೆ ಬಿದ್ದಿದ್ದವು. ಯಾರ ದೇಹ ಯಾರದ್ದೆಂದು ಗುರುತಿಸಲಾಗದಷ್ಟು ವಿಕಾರಗೊಂಡು ನೆತ್ತರ ಕೆಸರಲ್ಲಿ ಹೂತ್ತಿದ್ದವು. ರಥದ ಪತಾಕೆಗಳು ಹರಿದು ಹೋಗಿ ಭೋರೆಂದು ಬೀಸುವ ಗಾಳಿಗೆ ಅತ್ತಿಂದಿತ್ತ […]
