ಸವತೀ ಸಂಬಂಧ! ಈಗ ಇಪ್ಪತ್ತು ವರ್ಷದ ಹಿಂದೆ ಕಾರು ಎಂದರೆ ಲಗ್ಜುರಿಯಸ್ ಎಂದೆನಿಸಿತ್ತು. ಎಲ್ಲಿಯಾದರೂ ಸ್ಥಿತಿವಂತರಾದ ಒಬ್ಬೊಬ್ಬರು ಖರೀದಿಸುತ್ತಿದ್ದರು. ಈಗಿನ ಮಾತು ಬಿಡಿ, ಪಲ್ಯ ಮಾರುವವನ ಹತ್ತಿರವೂ ಕಾರು ಇರಲೇಬೇಕು! ಬೇರೆ ಊರಿನಿಂದ ತರಲು ಹಾಗೂ ಬೇರೆ ಮಾರುಕಟ್ಟೆಗೆ ಕಳಿಸಲು. ಸರಿ, ನಮ್ಮನೆಯವ್ರು ಕಾರು ತೊಗೋತೀನಿ ಅಂದಾಗ ನನಗ ಮುಗಿಲು ಮೂರೇ ಗೇಣು ಎಂತಾತು. ಯಾವ ಕಾರು ಯಾವ ಬಣ್ಣ, ಎಷ್ಟ ರೇಟು ಒಂದೂ ಕೇಳಲಿಲ್ಲ ನಾನು. ಕಾರು ಬಂದರೆ ಸಾಕು ಅದರಲ್ಲಿ ಕುತ್ತರೆ ಸಾಕು ಎಂಬಂತಾಗಿತ್ತು […]
