ಸ್ಥಿತಪ್ರಜ್ಞತೆ ಸ್ಥಿತಪ್ರಜ್ಞ ಎಂದರೆ ಸ್ಥಿರವಾದ ಬುದ್ದಿಯುಳ್ಳವ, ಶಾಂತಚಿತ್ತತೆಯನ್ನು ಹೊಂದಿರುವವ, ರಾಗದ್ವೇಷರಹಿತ, ಸುಖ ಹಾಗೂ ದುಃಖಗಳಲ್ಲಿ ವಿಚಲಿತನಾಗದ, ಯಾವಾಗಲೂ ಸಂತೃಪ್ತಿಯನ್ನು ಹೊಂದಿರುವವ ಹಾಗೂ ಆನಂದವನ್ನು ಹೊಂದಿರುವವ ಎಂಬುದು ಸಾಮಾನ್ಯ ಅರ್ಥ. ಸುಖ ಬಂದಾಗ ಹೆಚ್ಚು ಹಿಗ್ಗದೇ, ಮತ್ತು ದುಃಖ ಬಂದಾಗ ಕುಗ್ಗಿ ಕುಸಿಯದೇ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಸ್ಥಿತಪ್ರಜ್ಞನ ಲಕ್ಷಣ. ಈ ಸ್ಥಿತಪ್ರಜ್ಞತೆಯೇ ಯಶಸ್ವೀ ಬದುಕಿಗೆ ಮುನ್ನುಡಿ. ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ಕಾಲದಲ್ಲಿ ಕೂಡ ಅತ್ಯಂತ ಪ್ರಸ್ತುತವಾಗಿವೆ. ಸ್ಥಿತಪ್ರಜ್ಞ […]
