ಸೂರಕ್ಕಿ (ಸನ್ ಬರ್ಡ್) ನಮ್ಮ ಮನೆಯ ಅಂಗಳಕ್ಕೆ ದಿನವೂ ಮುಂಜಾನೆ ದಾಳಿ ಇಡುವ ಸೂರಕ್ಕಿ(ಸನ್ ಬರ್ಡ್)ಗಳು, ದಾಸವಾಳ, ರತ್ನಗಂಧಿ ಹೂವಿನ ದೇಹದೊಳಗೆ ಸ್ಟ್ರಾನಂತಹ ತನ್ನ ಕೊಕ್ಕನ್ನು ಇಳಿಸಿ ‘ಸುರ್! ಸುರ್!’ ಎಂದು ಕ್ಷಣಾರ್ಧದಲ್ಲಿ ಮಧು ಹೀರಿ, ಅವಸರವಸರವಾಗಿ ಇನ್ನೊಂದು ಗಿಡದ ಹೂವಿನತ್ತ ಪುಸಕ್ಕನೇ ಜಾರಿ ಅಲ್ಲಿಯೂ ಮಧುಪಾನಗೈಯುವುದರಲ್ಲಿ ಬ್ಯುಸಿಯಾಗಿಬಿಡುತ್ತವೆ. ಈ ಹಕ್ಕಿಗಳು ಭಾರೀ ಕ್ರಿಯಾಶೀಲತೆಯಿಂದ ಅಂಗಳದೆಲ್ಲ ಹೂವಿನ ಮಕರಂದವನ್ನು ಹೀರಿ ಹೊಟ್ಟೆ ತುಂಬಿಸಿಕೊಳ್ಳುವ ಪರಿ ನೋಡುವುದೇ ಚೆಂದ. ಬಹಳಷ್ಟು ಸಲ ಎಲೆಯನ್ನೋ ಪಕ್ಕದ ಹೂವನ್ನೋ ಆಸರೆಯಾಗಿರಿಸಿಕೊಂಡು ಸರ್ಕಸ್ […]
