ಸ್ವಾತಂತ್ರ್ಯ ಮತ್ತು ನಾನು… ನನಗೆ ಎಂದೂ ಇಂಥ ಯೋಚನೆ ಬರುವುದೇ ಯಿಲ್ಲ. ಅಥವಾ ಹಾಗೆ ಯೋಚಿಸಲು ನಾನೇನು ಕಡಿದು ಕಟ್ಟೆ ಹಾಕುತ್ತೇನೆ? ಎಲ್ಲರೂ ಮಾಡುವದೇ ತಾನೇ? ಅಲ್ದೇ ನಾನೇನು ನೌಕರಿ ಮಾಡುವವಳೇ busy ಇರಲು? ಮನೆಯಲ್ಲಿ ಖಾಲಿ ಇದ್ದವಳಿಗೆ ಸದಾ ಆರಾಮೇ…ಸದಾ ಸ್ವಾತಂತ್ರ್ಯವೇ ತಾನೇ…? ಬೆಳಿಗ್ಗೆ ಐದಕ್ಕೆ ಎದ್ದು ಮನೆಯವರಿಗೆ ಟಿಫಿನ್/ ಮದ್ಯಾನ್ಹದ ಊಟದ ಡಬ್ಬಿ ಕಟ್ಟಿಕೊಟ್ಟು ಕಳಿಸಿದರೆ ಅವರ ಕೆಲಸ ಮುಗಿದೇ ಹೋಯ್ತು. ನಾನು ಸ್ವತಂತ್ರಳೇ… ನಂತರ ಮಕ್ಕಳಿಬ್ಬರನ್ನೂ ಎಬ್ಬಿಸಿ ಅವರು ಕೇಳಿದ ತಿನಿಸು ಇಬ್ಬರಿಗೂ […]
