ತನ್ನಂತೆ ಪರರ ಬಗೆದೊಡೆ… ಧಾರವಾಡದ ಹೆಂಬ್ಲಿ ಓಣಿಯ ನಮ್ಮ ಮನೆ ಅತಿ ದೊಡ್ಡದು. ಅದಕ್ಕೆ ತಕ್ಕಂತೆ ಹಿತ್ತಲವೂ ಇತ್ತು. ನನಗೂ ಹೂ ಗಿಡಗಳ ಹುಚ್ಚು. ಹೀಗಾಗಿ ಎಲ್ಲ ರೀತಿಯ ಹೂಬಳ್ಳಿಗಳು, ಹೂವಿನ/ಹಣ್ಣಿನ ಗಿಡಗಳೂ ಇದ್ದವು. ನಿಂಬೆ, ಕರಿಬೇವು, ಹಸಿಮೆೆಣಸಿನಕಾಯಿ, ಪೇರಲ, ಇನ್ನೂ ಏನೇನೋ…” ಶ್ರೀಮತಿ, ಸ್ವಲ್ಪ ಎಣ್ಣೆ, ರವೆ ಇಟ್ಟುಬಿಡು.ಬಂದವರು ಉಪ್ಪಿಟ್ಟು ಮಾಡಿಕೊಂಡು ತೋಟದಲ್ಲಿಯೇ ತಿಂದು ಹೋಗುತ್ತಾರೆ” ಎಂದು ತಮಾಷೆಯಾಗಿ ಹೇಳುವವರೂ ಇದ್ದರು. ಅನಿವಾರ್ಯವಾಗಿ ಬೆಂಗಳೂರಿಗೆ ವಲಸೆ ಬಂದಮೇಲೂ ನನಗೇನೂ ಹೆಚ್ಚು ವ್ಯತ್ಯಾಸವಾಗಲಿಲ್ಲ. ಏಕೆಂದರೆ ನಾವು ಇಲ್ಲಿಯೂ ಅಪಾರ್ಟ್ಮೆಂಟ್ನಲ್ಲಿ […]
