ತೃಣಕೆ ಹಸಿರೆಲ್ಲಿಯದು…? ಬೇರಿನದೇ? ಮಣ್ಣಿನದೇ? ಆಗ ಎಲ್ಲೆಡೆಯೂ ‘ಕೂಡು ಕುಟುಂಬ’ ಗಳಿದ್ದ ಕಾಲ. ಒಂದು ಮನೆಯಲ್ಲಿ ಕನಿಷ್ಠ ಆರೆಂಟು ಮಕ್ಕಳು. ಅಡಿಗೆಮನೆ /ದೇವರ ಕೋಣೆ ಅಜ್ಜಿಯ ಸುಪರ್ದಿಯಲ್ಲಿ. ಬಟ್ಟೆ ಒಗೆಯುವ, ಪಾತ್ರೆ ತಿಕ್ಕುವ, ಬಾವಿಯಿಂದ ನೀರು ಸೇದುವ, ಊಟಕ್ಕೆ ಬಡಿಸುವ ಕೆಲಸ ಅವ್ವಂದಿರಿಗೆ. ಕಸಗುಡಿಸುವ, ಊಟದ ತಟ್ಟೆ (ಎಲೆ)ಗಳನ್ನೆತ್ತಿ ಗೋಮಯ ಹಚ್ಚುವ, ಸಂಜೆ ಕಂದೀಲುಗಳಿಗೆ, ಚಿಮಣಿ ಬುಡ್ಡಿಗೆ ಎಣ್ಣೆ ತುಂಬಿ, ಅವುಗಳ ಗಾಜುಗಳನ್ನು ಒರೆಸಿಡುವ ಕೆಲಸ ಅಕ್ಕಂದಿರ ಪಾಲಿಗೆ. ಹತ್ತು/ ಹನ್ನೆರಡರ ಚಿಕ್ಕ ಬಾಲಕ/ಬಾಲಕಿಯರಿಗೆ ಅಂಗಡಿಗೆ ಓಡಿಹೋಗಿ […]
