ಉತ್ತರಾರ್ಧ- ಪುಸ್ತಕ_ಪರಿಚಯ ಜಯಶ್ರೀ ದೇಶಪಾಂಡೆಯವರ ಹೆಸರು ಕೇಳಿರದ ಕನ್ನಡ ಸಾಹಿತ್ಯಾಸಕ್ತರೇ ಇಲ್ಲವೆಂದೇ ಹೇಳಬಹುದು. ಅವರ ಹರಟೆಗಳೇ ಇರಲಿ, ಲಲಿತ ಪ್ರಬಂಧಗಳೇ ಇರಲಿ, ಕವನಗಳೇ ಇರಲಿ, ಕಥೇಗಳೇ ಇರಲಿ, ಕಾದಂಬರಿಗಳೇ ಇರಲಿ ಎಲ್ಲದರಲ್ಲೂ ಒಂದು ಹೊಸತನವಿರುತ್ತದೆ, ಅವರಿಗೆ ಇರುವ ಲೋಕಾನುಭವದ, ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ತಿರುಗಿ, ಅಲ್ಲಿಯ ಜನಜೀವನ, ಆಚಾರ ವಿಚಾರಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಹಾಗೂ ಅವುಗಳನ್ನು ಅನೇಕ ಸಾಹಿತ್ಯ ಪ್ರಕಾರಗಳ ಮೂಲಕ ಜನಮಾನಸವನ್ನು ತಲುಪಿಸುವ ಗುರಿ ಹೊಂದಿರುವ ಇವರ ಕೃತಿಗಳನ್ನು ಓದುವುದೆಂದರೆ ಓದುಗರಿಗೆ ಒಂದು ರಸದೌತಣವಿದ್ದಂತೆ […]
