ವೈದ್ಯೋ ನಾರಾಯಣೋ ಹರಿಃ ಡಾಕ್ಟರ ಎಂದಾಕ್ಷಣವೇ ಕಣ್ಣ ಮುಂದೆ ಸೂಟುಬೂಟು ಹಾಕಿದ, ಮೂಗಿನ ಮೇಲೆ ಕನ್ನಡಕವೇರಿಸಿದ, ಶುಭ್ರಬಟ್ಟೆ ತೊಟ್ಟು, ಕೊರಳಲ್ಲಿ ಮಾಲೆಯ ಹಾಗೆ ಸ್ಟತೋಸ್ಕೋಪ ಹಾಕಿಕೊಂಡ ಮನುಷ್ಯನ ಆಕೃತಿ ಅಲೆಅಲೆಯಾಗಿ ತೇಲಿ ಬರುತ್ತಿದ್ದಿರಬೇಕಲ್ಲವೇ. ಆದರೆ ನಾನು ಹೇಳಹೊರಟ ಡಾಕ್ಟರ ಎಂಥದೂ ಮುಚ್ಚಟೆ, ಹಮ್ಮುಬಿಮ್ಮು ಇರದ ಸೀದಾಸಾದಾ ಬಿಳಿಯ ಪಾಯಜಾಮ ಹಾಗೂ ಜುಬ್ಬಾ ತೊಟ್ಟ ಡಾಕ್ಟರ ಕೆರೆಮನೆ. ಆತನ ಮನೆಇರುವುದು ಒಂದು ವಿಶಾಲವಾದ ಕೆರೆಯ ದಂಡೆಯ ಪಕ್ಕದಲ್ಲಿ. ಎದುರಿಗೆ ಹನುಮಪ್ಪ ದೇವರ ಗುಡಿ. ಹೀಗಾಗಿ ಆತನಿಗೆ ಅಡ್ಡಹೆಸರು ಹನುಮಪ್ಪನ […]
