ವೈವಾಹಿಕ ಜೀವನದ ಯಶಸ್ಸಿಗೆ ಹೊಂದಾಣಿಕೆ ಹಾಗೂ ಸಾಮರಸ್ಯ ಮುಖ್ಯ ಬದುಕಿನ ಪ್ರಮುಖ ನಿರ್ಧಾರಗಳಲ್ಲಿ ವಿವಾಹವೂ ಒಂದು. ಹೊಸದಾಗಿ ಮದುವೆ ಮಾಡಿಕೊಂಡು ತನ್ನ ಸಂಗಾತಿಯೊಂದಿಗೆ ಜೀವನ ಹಂಚಿಕೊಳ್ಳುವ ಉತ್ಸಾಹ ಒಂದು ಕಡೆಯಾದರೆ, ಮತ್ತೊಂದು ಕಡೆ ಹೊಸ ಪರಿಸರ, ಹೊಸ ಸಂಗಾತಿಯೊಂದಿಗೆ ಅಪರಿಚಿತ ವಾತಾವರಣದಲ್ಲಿ ವಾಸಿಸುವುದು ಸವಾಲಿನ ಸಂಗತಿಯಾಗಿರುತ್ತದೆ. ಇದು ಹೆಣ್ಣು ಹಾಗೂ ಗಂಡು ಇಬ್ಬರಿಗೂ ಕೂಡ ಅನ್ವಯವಾಗುತ್ತದೆ. ಆದರೂ ಹೊಸ ಬದುಕಿಗೆ ಹೊಂದಿಕೊಳ್ಳುವುದು ಎಂದರೆ ಗಂಡಿಗಿಂತಲೂ ಹೆಣ್ಣಿಗೇ ತೀವ್ರ ಒತ್ತಡಕರ ವಿಷಯ. ಏಕೆಂದರೆ ಗಂಡಿಗೆ ಕೇವಲ ಹೆಂಡತಿಯೊಬ್ಬಳೇ ಅಪರಿಚಿತಳಾದರೆ […]
