ವರ್ಲ್ಡ್ ಬೈಸಿಕಲ್ ಡೇ ದಂದು ಒಂದು ನೆನಪು… ಅಪ್ಪನನ್ನು ಕಳೆದುಕೊಂಡಾಗ ನನ್ನ ಮಗನಿಗೆ ಹನ್ನೆರಡು ವರ್ಷಗಳು.ಅದೇ ವರ್ಷ ಇಂಗ್ಲಿಷ್ ಮೀಡಿಯಮ್ ಗೆ ಎಂದು ಕರ್ನಾಟಕ ಹೈಸ್ಕೂಲ್ ನಿಂದ ಮಾಳಮಡ್ಡಿ K.E B’s ಶಾಲೆಗೆ ಹೆಸರು ಹಚ್ಚಿತ್ತು. ಹೊಸಶಾಲೆ. ಇನ್ನೂ ಅಷ್ಟು friends ಆಗಿರಲಿಲ್ಲ. ಮಾಳಮಡ್ಡಿಯಲ್ಲಿರುವ ಆ ಶಾಲೆಗೆ ಹೋಗುವ ದಾರಿ ತುಂಬಾ ಏರು, ತಗ್ಗು. ಅಪ್ಪ / ಗೆಳೆಯರ ಜೊತೆ ಕರ್ನಾಟಕ ಹೈಸ್ಕೂಲ್ ಗೆ ಸಲೀಸಾಗಿ ಹೋಗುತ್ತಿದ್ದ ಅವನಿಗೆ ಈಗ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ. ತಿಂಗಳಾದ ಕೂಡಲೇ ಸೈಕಲ್ […]
