ಯಾದೋಂ ಕಿ ಗಲಿಯೋಂ ಮೆ ಹಮ್ ರಖೇಂಗೆ ಕದಮ್.. ಈಗ ಎರಡು ದಿನಗಳ ಹಿಂದೆ ನನ್ನೊಬ್ಬ ಹಳೆಯ ವಿದ್ಯಾರ್ಥಿಯಿಂದ ನನಗೆ ಫೋನ್ ಬಂತು. ನಿಮ್ಮನ್ನು ಭೇಟಿಯಾಗಬೇಕಾಗಿತ್ತು ಟೀಚರ್ ಅಂದ. ಇಪ್ಪತೈದು ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯಾದವ. ಈಗ ಅವನುದ್ದದ ಮಗನೋ, ಮಗಳೋ ಇರಬಹುದು ಅವನಿಗೆ.. ಆದರೂ ನನಗೇನೂ ಆಶ್ಚರ್ಯ ಆಗಲಿಲ್ಲ ನನಗೆ. ಇತ್ತೋಚೆಗೆ ಹತ್ತು ವರ್ಷಗಳಿಂದ ಕೆಲಸದ ನಿಮಿತ್ತ ಬೇರೆ ಬೇರೆಕಡೆಯಲ್ಲಿ ಕೆಲಸ ಮಾಡುವ ಸ್ನೇಹಿತರು ಆಗಾಗ ತಮ್ಮ ತಾಯಿಬೇರು ಹುಡುಕಿಕೊಂಡು ಬಂದು, ಆ ಭೇಟಿಗಳಿಗೆ Reunion […]
