Your Cart

Need help? Call +91 9535015489

📖 Print books shipping available only in India. ✈ Flat rate shipping

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೪: ಕನ್ನಡದಲ್ಲಿ ಅನುವಾದದ ಸಮಸ್ಯೆಗಳು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೪: ಕನ್ನಡದಲ್ಲಿ ಅನುವಾದದ ಸಮಸ್ಯೆಗಳು

ಇತ್ತೀಚೆಗೆ ಕನ್ನಡದಲ್ಲಿ ಅನುವಾದ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ – ವಿಶೇಷವಾಗಿ ಬೇರೆ ಭಾಷೆಗಳಿಂದ ಕನ್ನಡಕ್ಕೆ. ಅನುವಾದಗಳಿಂದ ನಮ್ಮ ಭಾಷೆ, ಸಾಹಿತ್ಯ, ಜ್ಞಾನ ಬೆಳೆಯುವದರ ಜೊತೆಗೆ ನಮ್ಮ ಸಾಹಿತ್ಯವನ್ನು ನೋಡಲು ಹೊಸ ಒಳನೋಟ, ಹೊಸ ಮಾನದಂಡಗಳು ಸಿಗುತ್ತವೆ. ಇಂದು ಅನುವಾದಗಳ ಜೊತೆಗೆ ಅನುವಾದಗಳ ಸಿದ್ಧಾಂತಗಳೂ ರೂಪಗೊಳ್ಳುತ್ತಿವೆ. ಹಾಗೆಯೇ ಅನುವಾದವೆಂದರೆ ಪಠ್ಯವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಬದಲಿಸುವದಷ್ಟೇ ಅಲ್ಲ. ಅದು ಭಾಷೆ, ಅರ್ಥ, ಸಂಸ್ಕೃತಿ, ಮನೋಧರ್ಮ, ದೃಷ್ಟಿಕೋನಗಳಲ್ಲಿ ನಡೆಯುವ ಬದಲಾವಣೆಯೂ ಹೌದು.

Leave a Reply