ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೦: ಭಾಗ ೨: ಸಾಹಿತಿಗಳೊಂದಿಗೆ ನಾವು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೦: ಭಾಗ ೨: ಸಾಹಿತಿಗಳೊಂದಿಗೆ ನಾವು

ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು ಸಾಹಿತಿಗಳಷ್ಟೇ ಅಲ್ಲ, ಸಾಹಿತ್ಯವನ್ನು ಪ್ರೀತಿಯಿಂದ ಓದಿಕೊಂಡು, ಸಾಹಿತಿಗಳೊಂದಿಗೆ. ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿರುವ ಸಾವಿರಾರು ಜನ ಸಾಹಿತ್ಯಾಸಕ್ತರಿದ್ದಾರೆ. ಇಂಥವರು ಸಾಹಿತ್ಯಕ್ಕೆ ಸಂಬಂಧಿಸಿದ ಸಮಾರಂಭಗಳಲ್ಲಿ ಕೇವಲ ಕೇಳುಗರಾಗಿ ಭಾಗವಹಿಸುದಕ್ಕಷ್ಟೇ ಸೀಮಿತರಾಗಿರುತ್ತಾರೆ. ಆದರೆ ಸಾಹಿತ್ಯದ ಪೋಷಣೆ, ಬೆಳವಣಿಗೆಗಳಲ್ಲಿ ಅವರ ಪಾಲು ದೊಡ್ಡದು. ಅವರೇ ಪುಸ್ತಕಗಳನ್ನು ಕೊಳ್ಳುವವರು, ಓದುವವರು, ಸಮಾನಮನಸ್ಕರೊಂದಿಗೆ ಚರ್ಚಿಸುವವರು. ಭಾಷೆ-ಸಾಹಿತ್ಯಗಳ ಬಗ್ಗೆ ಅಭಿಮಾನವಿರುವವರಿಗೂ ಸಾಹಿತ್ಯ ಸಂಭ್ರಮದಲ್ಲಿ ವೇದಿಕೆ ಒದಗಿಸಬೇಕು ಎಂಬ ಉದ್ದೇಶ ಈ ಗೋಷ್ಠಿಯದು.
ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿರುವ ಇಂಥ ಸಾಹಿತ್ಯಾಸಕ್ತರು ಸಾಹಿತಿಗಳೊಂದಿಗಿನ ತಮ್ಮ ಸ್ವಾರಸ್ಯಕರ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಅವರ ಪ್ರಸಂಗಗಳು ಸಾಹಿತ್ಯದ ಬಗೆಗಿನ ನಮ್ಮ ಪ್ರೀತಿಯನ್ನು ಇನ್ನಷ್ಟು ಬೆಳೆಸಬಲ್ಲವು. ಹಾಗೆಯೇ, ಸಾಹಿತಿಗಳ ಬದುಕಿನ ಮೇಲೆ, ಅವರ ಸಾಹಿತ್ಯದ ಮೇಲೆ ಹೊಸ ಬೆಳಕನ್ನು ಚೆಲ್ಲಬಹುದು. ಸಾಹಿತ್ಯ ಸಂಭ್ರಮದ ಗಂಭೀರ ಚರ್ಚೆಗಳ ನಡುವೆ ಇದೊಂದು ಮನಸ್ಸು ಹಗುರಾಗಿಸುವ ಪ್ರಸಂಗ. ಕಳೆದ ಮೂರು ವರ್ಷಗಳಿಂದಲೂ ಅತ್ಯಂತ ಜನಪ್ರಿಯವಾಗಿರುವ ಗೋಷ್ಠಿಯದು.
ಶ್ರೀನಿವಾಸ ವೈದ್ಯ, ಟಿ.ಎನ್.ಸೀತಾರಾಮ, ಮಹಾಬಲಮೂರ್ತಿ ಕೊಡ್ಲೆಕೆರೆ, ವಸುಂಧರಾ ಭೂಪತಿ, ಬಿ.ಆರ್.ರವಿಕಾಂತೇಗೌಡ, ವೈ.ಎಸ್.ವಿ.ದತ್ತ, ಶಾ.ಮಂ.ಕೃಷ್ಣರಾವ್ ಈ ಗೋಷ್ಠಿಯಲ್ಲಿ ತಮ್ಮ ಸಾಹಿತ್ಯಿಕ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಪ್ರಸಿದ್ಧ ಹಾಸ್ಯನಟ – ನಿರ್ದೇಶಕ ಯಶವಂತ ಸರದೇಶಪಾಂಡೆ ಈ ಗೋಷ್ಠಿಯನ್ನು ನಿರ್ವಹಿಸುತ್ತಾರೆ.

Leave a Reply