ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೩: ಕನ್ನಡದಲ್ಲಿ ಇಷ್ಟೊಂದು ಮಹಾಕಾವ್ಯಗಳು ಏಕೆ?

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೩: ಕನ್ನಡದಲ್ಲಿ ಇಷ್ಟೊಂದು ಮಹಾಕಾವ್ಯಗಳು ಏಕೆ?

ಆಧುನಿಕ ಕಾಲದಲ್ಲಿ ಮಹಾಕಾವ್ಯ ಹುಟ್ಟಲಾರದು. ಅದಕ್ಕೆ ಬೇಕಾದ ಸಾಮಾಜಿಕ ವ್ಯವಸ್ಥೆ, ಸಾಂಘಿಕ ಅನುಭವ ಈಗಿಲ್ಲ ಎಂಬ ಅಭಿಪ್ರಾಯವೊಂದಿತ್ತು. ಭಾರತದ ಉಳಿದ ಭಾಷೆಗಳಲ್ಲಿ ಹೇಗೋ, ಏನೋ ಕನ್ನಡದಲ್ಲಿ ಮಾತ್ರ ಕಳೆದ ಶತಮಾನದಿಂದಲೂ ಅನೇಕ ಮಹಾಕಾವ್ಯಗಳು ರಚನೆಯಾಗಿವೆ. ಮರಾಠಿಯಲ್ಲಿ ಮಹಾಕಾವ್ಯಗಳಿಲ್ಲ ಯಾಕಂದರೆ ಆ ಭಾಷೆಯಲ್ಲಿ ಮಹಾಕಾವ್ಯಗಳ ಪರಂಪರೆ ಇರಲಿಲ್ಲ ಎನ್ನುತ್ತಾರೆ. ಕನ್ನಡದಲ್ಲಿ ಮಹಾಕಾವ್ಯಗಳ ದೀರ್ಘ ಪರಂಪರೆ ಇದ್ದುದೇ ಈಗಿನ ಅವುಗಳ ರಚನೆಗೆ ಕಾರಣವಾಗಿದೆಯೆ? ನಮ್ಮಲ್ಲಿ ಇಷೊಂದು ಮಹಾಕಾವ್ಯಗಳು ಬರಲು ಕಾರಣಗಳೇನು? ಅವುಗಳ ಹಿಂದಿನ ಪ್ರೇರಣೆ ಒತ್ತಡಗಳೇನು? ಅವುಗಳ ಪ್ರಸ್ತುತತೆ, ಅಗತ್ಯ ಏನು? ಅವುಗಳನ್ನು ಯಾರು ಓದುತ್ತಾರೆ? ಶ್ರೀ ರಾಮಾಯಣ ದರ್ಶನದಂಥ ಮಹಾಕಾವ್ಯವನ್ನು ಬಿಟ್ಟರೆ ಉಳಿದವುಗಳ ಚರ್ಚೆ ಎಷ್ಟರಮಟ್ಟಿಗೆ ನಡೆದಿದೆ? ಕಾದಂಬರಿ ಮಹಾಕಾವ್ಯಕ್ಕೆ ಆಧುನಿಕ ಪರ್ಯಾಯ ಎಂಬ ಮಾತಿದೆ. ಕಾದಂಬರಿ ಇದ್ದೂ ಮಹಾಕಾವ್ಯ ಬರಲು ಕಾರಣವೇನು? ಕಾದಂಬರಿ ಮಾಡದ ಏನನ್ನು ಮಹಾಕಾವ್ಯ ಮಾಡಿದೆ; ಮಾಡಬಲ್ಲುದು?
ಈ ಪ್ರಶ್ನೆಗಳನ್ನು ಎತ್ತಿಕೊಂಡು, ಮಹಾಕಾವ್ಯಗಳನ್ನು ಬರೆದಿರುವ ಲತಾ ರಾಜಶೇಖರ ಮತ್ತು ಧರಣಿದೇವಿ ಮಾಲಗತ್ತಿ ಅವರು ತಮ್ಮ ಮಹಾಕಾವ್ಯಗಳ ಹಿನ್ನೆಲೆಯಲ್ಲಿ ಉತ್ತರಿಸುತ್ತಾರೆ. “ಮಲೆಮಹದೇಶ್ವರ” ಜಾನಪದ ಮಹಾಕಾವ್ಯವನ್ನು ಇಂಗ್ಲೀಷಿಗೆ ಅನುವಾದಿಸಿರುವ ವಿಮರ್ಶಕ ಸಿ.ಎನ್.ರಾಮಚಂದ್ರನ್ ಅವರು ಮಹಾಕಾವ್ಯ ಮತ್ತು ಜಾನಪದ ಮಹಾಕಾವ್ಯಗಳ ಸೈದ್ಧಾಂತಿಕ ನೆಲೆಗಳ ಹಿನ್ನೆಲೆಯಲ್ಲಿ ಚರ್ಚೆಯಲ್ಲಿ ಭಾಗವಹಿಸುತ್ತಾರೆ.
ಮಹಾಕಾವ್ಯವೊಂದನ್ನು ಬರೆಯಲು ಹೊಂಚು ಹಾಕುತ್ತಿರುವ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರು ಚರ್ಚೆಯನ್ನು ನಡೆಸಿಕೊಡುತ್ತಾರೆ.
ಲತಾ ರಾಜಶೇಖರ
ಧರಣಿದೇವಿ ಮಾಲಗತ್ತಿ
ಸಿ.ಎನ್.ರಾಮಚಂದ್ರನ್
ಎಚ್.ಎಸ್.ವೆಂಕಟೇಶಮೂರ್ತಿ

Leave a Reply