ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ರಂಗಗೀತೆಗಳು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ರಂಗ ಗೀತೆಗಳು

ಬಿ.ಜಯಶ್ರೀ ಮತ್ತು ತಂಡ

ಶ್ರೀಮತಿ ಬಿ.ಜಯಶ್ರೀ ಅವರ ತಂಡದಿಂದ ರಂಗಗೀತೆಗಳ ಪ್ರಸ್ತುತಿ. ಮರಾಠಿಯಲ್ಲಿ ‘ರಂಗಗೀತೆ’ಗಳ ಒಂದು ಪರಂಪರೆಯೇ ಬೆಳೆದು ಬಂದಿದೆ. ಅದು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಒಂದು ಪ್ರಕಾರವಾಗಿ ಇಂದಿಗೂ ಜನಪ್ರಿಯವಾಗಿದೆ. ಕನ್ನಡದಲ್ಲಿ ಅಂಥ ರಂಗಸಂಗೀತ ಒಂದು ಕಾಲಕ್ಕೆ ಇತ್ತು, ಈಗ ಇಲ್ಲ. ಅದಕ್ಕೆ ಬದಲಾಗಿ, ಕನ್ನಡದ ಆಧುನಿಕ ರಂಗಭೂಮಿಯು ರಂಗಭೂಮಿಗೇ ವಿಶಿಷ್ಟವಾದ ಹೊಸ ಸಂಗೀತಪ್ರಕಾರವೊಂದನ್ನು ರೂಪಿಸಿಕೊಂಡಿದೆ. ಇದಕ್ಕೆ ಅಸ್ತಿವಾರ ಹಾಕಿ ಜನಪ್ರಿಯಗೊಳಿಸಿದವರು ಬಿ.ವಿ.ಕಾರಂತರು. ಕಾರಂತರ ಗರಡಿಯಲ್ಲಿ ಬೆಳೆದ ಜಯಶ್ರೀ ಅವರ ತಂಡ ಇಂಥ ಜನಪ್ರಿಯ ಹೊಸ ರಂಗಗೀತೆಗಳನ್ನು ಪ್ರಸ್ತುತಪಡಿಸುತ್ತದೆ.

Leave a Reply