ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧ – ಆಸಹಿಷ್ಣುತೆ
Jun 07

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧ – ಆಸಹಿಷ್ಣುತೆ

ಗೋಷ್ಠಿ ೧ – ಆಸಹಿಷ್ಣುತೆ:

ಇವತ್ತು ನಮ್ಮ ರಾಜಕೀಯ. ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ತಲ್ಲಣವನ್ನುಂಟುಮಾಡಿರುವುದು ಆಸಹಿಷ್ಣುತೆ. ಇದರಲ್ಲಿ ಎಡ – ಬಲ ಎಂಬ ಭೇದವೇನೂ ಇಲ್ಲ. ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿರುವ ಬಹುತ್ವಕ್ಕೆ ಇದರಿಂದ ಅಪಾರವಾದ ಹಾನಿಯಾಗಿದೆ. ಮೂಲಭೂತವಾದ ಎಲ್ಲ ಕಡೆಗೂ ಹೆಡೆಯೆತ್ತಿ ಬುಸುಗುಡುತ್ತಿದೆ. ತಮಗೆ ಹಿಡಿಸದ ವಾದಗಳನ್ನು ಔಚಿತ್ಯದ ಎಲ್ಲೇ ಮೀರಿ ಮನಬಂದಂತೆ ಟೀಕಿಸುವ ಒಂದು ಪಂಥವಿದ್ದರೆ ಅಂಥ ವಾದಗಳನ್ನು ಪ್ರಾಣ ತೆಗೆದಾದರು ಹತ್ತಿಕ್ಕಬೇಕೆನುವ ಇನ್ನೊಂದು ಪಂಥ ಇದೆ. ಇದರಿಂದಾಗಿ, ಇವತ್ತು ನಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ ಹೇಳಲಿಕ್ಕೆ ಸಾಧ್ಯವಾಗದ ವಾತಾವರಣ ಉಂಟಾಗಿದೆ. ಪರಸ್ಪರ ಸಂವಾದವೇ ಸಾಧ್ಯವಿಲ್ಲದಂತೆ ಎಡ- ಬಲಗಳು ಪರಸ್ಪರ ಮೊರೆ ತಿರುವಿಕೊಂಡು ಕುಳಿತಿವೆ.

ಇಂಥ ಪರಿಸ್ತಿತಿ ನಿರ್ಮಾಣವಾಗುವದಕ್ಕೆ ಕಾರಣವೇನು? ನಮ್ಮ ಬಹುತ್ವ ಸಂಸ್ಕೃತಿಯ ಮೇಲೆ ಇದರ ಪರಿಣಾಮಗಳೇನು? ಇದರ ದುಷ್ಪರಿಣಾಮಗಳನ್ನು ನಿವಾರಿಸಿಕೊಳ್ಳುವುದು ಹೇಗೆ? ಎರಡೂ ಪಂಥಗಳ ಸಂವಾದಕ್ಕೆ ಬರುವಂತೆ ಮಾಡುವುದು ಹೇಗೆ?

ಡಾ. ಎಂ. ಎಂ. ಕಲಬುರ್ಗಿಯವರ ಕ್ರೊರ ಹತ್ಯೆಯ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿರುವ ಈ ಪ್ರಶ್ನೆಗಳನ್ನು ಕೆ. ಮರಳಸಿದ್ದಪ್ಪ, ಬಿ. ಎಲ್. ಶಂಕರ, ನಟರಾಜ್ ಹುಳಿಯಾರ ಮತ್ತು ಜಿ. ಬಿ. ಹರೀಶ್ ಅವರು ಚರ್ಚಿಸುತ್ತಾರೆ.

ಆಸಹಿಷ್ಣುತೆಯ ವಿರುದ್ದದ ಚಳುವಳಿಗಳಲ್ಲಿ ಮುಖ್ಯ ಪಾತ್ರ ವಹಿಸಿರುವ ರಾಜೇಂದ್ರ ಚೆನ್ನಿ ಅವರು ಈ ಚರ್ಚೆಯನ್ನು ನಡೆಸಿಕೊಡುತ್ತಾರೆ.

You may also like

12311
Page 1 of 11

This site uses Akismet to reduce spam. Learn how your comment data is processed.