Amitabh Bagchi
ಅಮಿತಾಭ ಬಗ್ಚಿ ಅವರು ಭಾರತೀಯ ಲೇಖಕರು. 2019ರಲ್ಲಿ ಇವರ ಹಾಫ್ ದ ನೈಟ್ ಇಸ್ ಗಾನ್ ಕಾದಂಬರಿಗಾಗಿ ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ನೀಡುವ ಡಿಎಸ್ಸಿ ಪ್ರಶಸ್ತಿಯನ್ನು ಪಡೆದರು. ಇದೇ ಕಾದಂಬರಿಗಾಗಿ ಜೆಸಿಬಿ ಪ್ರಶಸ್ತಿ ಮತ್ತು ದಿ ಹಿಂದೂ ಸಾಹಿತ್ಯ ಪ್ರಶಸ್ತಿಗೆ ಶಾರ್ಟ್ಲಿಸ್ಟ್ ಆಗಿದ್ದರು. ಇವರು ಐದು ಕಾದಂಬರಿಗಳ ರಚನೆ ಮಾಡಿದ್ದಾರೆ. 1974ರಲ್ಲಿ ದೆಹಲಿಯಲ್ಲಿ ಜನಿಸಿದ ಇವರು ಪ್ರಸ್ತುತ ಐಐಟಿ ದೆಹಲಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಎಸ್ಸಿ ಪ್ರಶಸ್ತಿ ಅವರಿಗೆ ನೇಪಾಳ ಸಾಹಿತ್ಯ ಉತ್ಸವದಲ್ಲಿ ಪ್ರದಾನ ಮಾಡಲಾಯಿತು. ಇವರ ಪ್ರಕಟಿತ ಕಾದಂಬರಿಗಳು – ಅಬೋವ್ ಅವರೆಜ್ (2007), ದಿ ಹೌಸ್ಹೋಲ್ಡರ್ (2012), ದಿಸ್ ಪ್ಲೇಸ್ (2013), ಹಾಫ್ ದ ನೈಟ್ ಇಸ್ ಗಾನ್ (2018), ಮತ್ತು ಅನ್ನೌನ್ ಸಿಟಿ (2025). ಇದಲ್ಲದೆ, ಇವರು ಉರ್ದೂ ಕವಿ ಮುನೀರ್ ನಿಯಾಜಿಯವರ ಕವನ ಸಂಕಲನವನ್ನು ಲಾಸ್ಟ್ ಪ್ಯಾರಡೈಸ್: ಸೆಲೆಕ್ಟೆಡ್ ಗಝಲ್ಸ್ ಆಫ್ ಮುನೀರ್ ನಿಯಾಜಿ (2022) ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.