Your Cart

Need help? Call +91 9535015489

📖 Print books shipping available only in India. ✈ Flat rate shipping

ಬಕುಲದ ಬಾಗಿಲಿನಿಂದ

Sudha Adukala
$2.18

Product details

Book Format

Printbook

Author

Sudha Adukala

Publisher

Bahuroopi

Language

Kannada

Category

Articles

ಬಕುಲದ ಬಾಗಿಲಿನಿಂದ:

ಬಕುಲದ ಬಾಗಿಲಿನಿಂದ- ನೀವು ಹೊಕ್ಕು ನೋಡಲೇಬೇಕಾದ ಲೋಕ. ಇಲ್ಲಿ ನಿಟ್ಟುಸಿರಿದೆ, ನಿಲೆ ಹಾಕಿ ಕೇಳುವ ಧೈರ್ಯವಿದೆ, ಬದುಕಿನ ಬಗ್ಗೆ ಹುಮ್ಮಸ್ಸಿದೆ. ಪ್ರಶ್ನಿಸುವ ಮನಸ್ಸಿದೆ. ಇಲ್ಲಿ ರಾಧೆ, ಕುಂತಿ, ಮಾದ್ರಿ, ಅಂಬೆ, ಅವಧೇಶ್ವರಿಯರಿದ್ದಾರೆ. ಅಂತೆಯೇ ಅಮೃತಾ ಪ್ರೀತಮ್, ಮಾಧವಿ, ಕುಬ್ಜೆ ಮಾಲಿನಿ, ಮಣಿಪುರದ ಚಿತ್ರಾ ಸಹಾ ಇದ್ದಾರೆ. ಸೀತೆ ಹಾಗೂ ಅವಳ ಸಹಚಾರಿಗಳಿದ್ದಾರೆ. ಕಾಯುತ್ತಲೇ ಇರುವ ಊರ್ಮಿಳೆಯರಿದ್ದಾರೆ. ಕಾಣೆಯಾಗುತ್ತಿರುವ ಶಾಂತಲೆಯರಿದ್ದಾರೆ. ಗೊರವನ ಬೆನ್ನಟ್ಟಿದ ಅಕ್ಕ ಇದ್ದಾಳೆ. ಕಲ್ಲಾದ ಅಹಲ್ಯೆಯರಿದ್ದಾರೆ. ಮಧ್ಯರಾತ್ರಿ ಎದ್ದು ಹೋದ ಗೌತಮರನ್ನು ನೋಡಿದ ಅನೇಕ ಯಶೋಧರೆಯರಿದ್ದಾರೆ, ಮೊಲೆಯನ್ನೇ ಕುಯ್ದು ಕೈಗಿಟ್ಟ ನಂಗೇಲಿಯರಿದ್ದಾರೆ. ಶಚೀತೀರ್ಥದಲ್ಲಿ ಉಂಗುರ ಕಳೆದುಕೊಂಡ ಶಕುಂತಳೆಯರಿದ್ದಾರೆ. ಐವರ ಹೆಂಡತಿಯಾಗಿಯೂ ಆತ್ಮ ಸಂಗಾತಕ್ಕೆ ಹಲುಬಿದ ದ್ರೌಪದಿಯರಿದ್ದಾರೆ. ಕತ್ತಲೆಯನ್ನು ಜೀವನದುದ್ದಕ್ಕೂ ಹಾಸಿಕೊಂಡ ಗಾಂಧಾರಿಯರಿದ್ದಾರೆ. ಯೋನಿ ಛೇಧನದ ವಿರುದ್ಧ ಆಂದೋಲನ ಕಟ್ಟಿದ ವಾರಿಸ್ಗಳಿದ್ದಾರೆ. ಹೊಸ ಋತುಮಾನಕ್ಕೆ ನಾಂದಿ ಹಾಡಿದ ನಂದಿನಿಯರಿದ್ದಾರೆ. ಕವಿ ರವೀಂದ್ರರು ಆ ಕಾಲಕ್ಕೇ ಕೆತ್ತಿಕೊಟ್ಟ ದಿಟ್ಟೆಯರಿದ್ದಾರೆ.
ಈ ಎಲ್ಲರೂ ಇಡೀ ಭೂಮಂಡಲದ ಹೆಣ್ಣುಗಳ ಕಥೆಯನ್ನು ಹೇಳುತ್ತಿದ್ದಾರೆ. ಅವರಿಗೆ ಬಾಯಾಗಿದ್ದಾರೆ.