Your Cart

Need help? Call +91 9535015489

📖 Print books shipping available only in India. ✈ Flat rate shipping

ಬಾಟಮ್ ಐಟಮ್-1

Ravi Belagere
$0.54

Product details

Category

Articles

Author

Ravi Belagere

Book Format

Ebook

Pages

212

Language

Kannada

Publisher

Bhavana Prakashana

Year Published

2002

ನಾವು ಚಿಕ್ಕವರಿರುತ್ತೇವೆ. ಕ್ಷುದ್ರತನವಿರುತ್ತದೆ. ನಮಗೇ ಗೊತ್ತಾಗುವಂಥ ಸಣ್ಣತನಗಳಿರುತ್ತವೆ. ನಮ್ಮ ಬಲಹೀನತೆಗಳು ಭಯ ಹುಟ್ಟಿಸುವಂಥವಾಗಿರುತ್ತವೆ. ನಮ್ಮ ಸಮಸ್ಯೆಗಳು ದುರ್ಭರವೆನಿಸುತ್ತಿರುತ್ತವೆ. ಅವುಗಳನ್ನು ಹೇಗೆ handle ಮಾಡಬೇಕೋ ಅರ್ಥವಾಗದೆ ಕಂಗಾಲಾಗುತ್ತಿರುತ್ತೇವೆ. ಎಲ್ಲೋ ಒಂದು ಪ್ರಜ್ಞಾವಂತ ಸಲಹೆ ಸಿಕ್ಕೀತಾ ಅಂತ ತಡಕಾಡುತ್ತಿರುತ್ತೇವೆ.
ಹಾಗೆ ತಡಕಾಡುತ್ತಿದ್ದಾಗ ನನಗೆ ಸಿಕ್ಕಿದ್ದೇ ಈ -ಬಾಟಮ್ ಐಟಮ್.
ನನ್ನ ಪಾಲಿಗೆ ಬರವಣಿಗೆಯೆಂಬುದು ಕೇವಲ ಹೊಟ್ಟೆ ಪಾಡಲ್ಲ. Fancy ಅಲ್ಲ. ಅದು ಚಟವೂ ಅಲ್ಲ. ಬರೆಯುತ್ತ-ಬರೆಯುತ್ತ ನನ್ನನ್ನು ನಾನು ನನಗೇ ಅರ್ಥ ಮಾಡಿಸಿಕೊಡುವ ಮತ್ತು ನನ್ನನ್ನು ತಿದ್ದಿಕೊಳ್ಳುವುದಕ್ಕೆ ನೆರವಾಗುವ ವಿಚಿತ್ರ ಸಾಧನ. ‘ಬಾಟಮ್ ಐಟಮ್’ ಅಂಕಣದಲ್ಲಿ ನಾನು ನನ್ನ ಬಗ್ಗೆ ಬರೆದುಕೊಂಡೆ. ನನ್ನ ಪರಿಚಿತರ ಬಗ್ಗೆ ಬರೆದೆ. ಓದುಗರು ಬರೆದ ಪತ್ರಗಳ ಬಗ್ಗೆ ಬರೆದೆ. ಅವರ ಪ್ರಶ್ನೆಗಳನ್ನು ನನಗೆ ನಾನೇ ಹಾಕಿಕೊಂಡು, ನನ್ನದೇ ಧಾಟಿಯಲ್ಲಿ ಅವುಗಳಿಗೆ ಉತ್ತರ ಕಂಡುಕೊಂಡು ಬರೆದೆ. ಮೊದ ಮೊದಲು ನನ್ನ ಬಗ್ಗೆ, ಪತ್ರಿಕೆಯ ಬಗ್ಗೆ, ನಡೆದು ಹೋದ ಚಿಕ್ಕಪುಟ್ಟ ಘಟನೆಗಳ ಬಗ್ಗೆ, ನನಗಿಷ್ಟವಾಗುತ್ತಿದ್ದ ಹಳೆಯ ನಟ ನಟಿಯರ ಬಗ್ಗೆ, ಸಾಹಿತಿ ಕಲಾವಿದರ ಬಗ್ಗೆ ಬರೆದೆ. ಆಮಾಮೇಲೆ ಈ ಅಂಕಣಕ್ಕೊಂದು ಸ್ಪಷ್ಟ ರೂಪು ದೊರೆಯತೊಡಗಿತು. ನೇರವಾಗಿ ಬದುಕಿನ ಬಗ್ಗೆ ಬರೆಯತೊಡಗಿದೆ. ದಿನ ನಿತ್ಯ ಕಾಡುವ ಸಂಗತಿಗಳ ಬಗ್ಗೆ ಬರೆದೆ. ಗಂಡು-ಹೆಣ್ಣಿನ ಬಗ್ಗೆ, ನೈತಿಕ-ಅನೈತಿಕದ ಬಗ್ಗೆ, ತಪ್ಪು-ಸರಿಗಳ ಬಗ್ಗೆ, ಸ್ವಭಾವಗಳ ಬಗ್ಗೆ ಬರೆದೆ. ಓದುಗರ ಮೇಲೆ ಹೇರದಂತೆ ಬರೆಯಲು ಪ್ರಯತ್ನಿಸಿದೆ. “ನೀವು ಬರೆದದ್ದು ಸರಿ. ನಮಗೂ ಇದೆಲ್ಲ ತೋಚುತ್ತಾ ಇರುತ್ತೆ. ಆದರೆ ಬರೆಯೋಕೆ ಗೊತ್ತಾಗಲ್ಲ. ನಮಗೆ ಅನ್ನಿಸಿದ್ದನ್ನೇ ನೀವು ಬರೆಯುತ್ತೀರಿ” ಅಂತ ಅನೇಕ ಓದುಗರು ಹೇಳಿದರು. ಈಗಲೂ ಹೇಳುತ್ತಿರುತ್ತಾರೆ. ಈ ಬರವಣಿಗೆಯ ಅಸಲಿ ತಾಕತ್ತೇ ಅದು: