
ಜಿನ್ನಾರಿಂದ ಮೋದಿವರೆಗೆ
Kuldeep Nayyar$1.69 $1.52
Product details
Author | Kuldeep Nayyar |
---|---|
Translator | Mahabaleshwar Rao |
Publisher | Nava Karnataka |
Book Format | Printbook |
Language | Kannada |
Pages | 136 |
Year Published | 2021 |
Category | Articles |
ನೆಹರೂ, ಜಿನ್ನಾ, ಶೇಖ್ ಅಬ್ದುಲ್ಲರಿಂದ ಮೀನಾಕುಮಾರಿ, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿವರೆಗೆ ಪ್ರಬಲರ, ಪ್ರಖ್ಯಾತರ, ಮನಮೋಹಕರ ಮತ್ತು ಸಿರಿವಂತರ ಜೊತೆಗಿನ ನೇರ ಮುಖಾಮುಖಿಯ ಬಿಚ್ಚುಮನಸ್ಸಿನ ವ್ಯಕ್ತಿಚಿತ್ರಣ ಪ್ರಸಿದ್ಧ ಪತ್ರಕರ್ತರೋರ್ವರ ಲೇಖನಿಯಿಂದ.
ಸ್ವಾತಂತ್ರ್ಯಪೂರ್ವದ ಹಾಗೂ ಸ್ವಾತಂತ್ರ್ಯೋತ್ತರ ಭಾರತದ ಭವಿಷ್ಯವನ್ನು ರೂಪಿಸಿದ ಹಲವಾರು ಸ್ತ್ರೀ ಪುರುಷರ ಜೊತೆಗಿನ ತಮ್ಮ ಭೇಟಿಯ ಅನುಭವಗಳನ್ನು ನೆನಪಿಸಿಕೊಂಡು ಮುಕ್ತ ಹಾಗೂ ನಿರ್ಭಿಡೆಯ ನಿರೂಪಣೆಯ ಮೂಲಕ ಕಥಿಸುವ ಕುಲದೀಪ್ ನಯ್ಯರ್ ಆ ವ್ಯಕ್ತಿತ್ವಗಳ ಅಜ್ಞಾತವಾಗಿರುವ ಅಂಶಗಳನ್ನು ನಮ್ಮ ಮುಂದಿಡುತ್ತಾರೆ. ಜೊತೆಗೆ, ದೇಶದಲ್ಲಿ ಘಟಿಸಿದ ಹಲವು ಪ್ರಮುಖ ಘಟನಾವಳಿಗಳ ಮೇಲೆ
ಬೆಳಕು ಚೆಲ್ಲುತ್ತಾರೆ. ತಮ್ಮ ಮಗಳು ಮಾತ್ರವೇ ಉತ್ತರಾಧಿಕಾರಿಯಾಗಬೇಕೆಂದು ಬಯಸಿದ ನೆಹರೂ ಪರೋಕ್ಷವಾಗಿ ವಂಶಾಡಳಿತಗಾರರೆ? ನೆಹರೂರವರ ನಿಧನಾನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿ ಚುನಾಯಿತರಾಗುವಲ್ಲಿ ಸ್ವತಃ ನಯ್ಯರ್ ವಹಿಸಿದ ಪಾತ್ರವೇನು? ‘ಗಡಿನಾಡ ಗಾಂಧಿ’ ಎಂಬ ಗೌರವಕ್ಕೆ ಭಾಜನರಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನ್ ಭಾರತೀಯರನ್ನು ಬನಿಯಾಗಳೆಂದು ಕರೆಯಲು ಕಾರಣವೇನು? ಭಾರತ, ಪಾಕಿಸ್ತಾನ ಮತ್ತು ಬಂಗ್ಲಾದೇಶ- ಈ ಅಖಂಡ ಉಪಖಂಡದ ಪ್ರಧಾನಿ ಯಾರಾಗಬೇಕು ಎಂದು ಜುಲ್ಫೀಕರ್ ಅಲಿ ಭುಟ್ಟೊ ಯೋಚಿಸಿದ್ದರಾ?
ಈ ರಾಜಕೀಯ ನೆನಪುಗಳ ಜೊತೆ ‘ಪಾಕೀಜ’ ಸೆಟ್ ನ ಮೇಲೆ ಶಾಸ್ತ್ರಿಯವರು ಮೀನಾ ಕುಮಾರಿಯನ್ನು ಭೇಟಿ ಮಾಡಿದ ಸಂದರ್ಭ, ಒಂದು ಇಡೀ ಬಾಟ್ಲಿ ಬ್ಲ್ಯಾಕ್ ಡಾಗ್ ವಿಸ್ಕಿ ಕುಡಿದರೂ ಅಸ್ಖಲಿತವಾಗಿ ಕಾವ್ಯ ವಾಚನ ಮಾಡುತ್ತಿದ್ದ ಫೈಜ್ ಅಹ್ಮದ್ ಫೈಜ್ ರ ಕಾವ್ಯಪ್ರೇಮದ ಚಿತ್ತಾಕರ್ಷಕ ನಿರೂಪಣೆ ಕೂಡಾ ಹೆಣೆದುಕೊಂಡಿದೆ.
ಜೆ.ಆರ್.ಡಿ.ಟಾಟಾ ಹಾಗೂ ರತನ್ ಟಾಟಾ ಅವರನ್ನು ಹೋಲಿಸಿ ನೋಡುವಲ್ಲಗಲಿ, ನರೇಂದ್ರ ಮೋದಿಯವರಿಗೆ ಸಲಹೆ ನೀಡುವಲ್ಲಾಗಲಿ ಅಥವಾ ಮಹಾತ್ಮ ಗಾಂಧಿ ಮತ್ತು ಮೊಹಮ್ಮದ್ ಅಲಿ ಜಿನ್ನಾ ಬದುಕಿದ್ದರೆ ಭಾರತ-ಪಾಕ್ ಸಂಬಂಧಗಳ ಸ್ವರೂಪದಲ್ಲಾಗಬಹುದಾಗಿದ್ದ ಬದಲಾವಣೆಗಳ ಕುರಿತಾಗಲಿ ನಯ್ಯರ್ ತಮ್ಮ ಅಭಿಪ್ರಾಯವನ್ನು ನಿಸ್ಸಂಕೋಚವಾಗಿ ವ್ಯಕ್ತಪಡಿಸುತ್ತಾರೆ.
Customers also liked...
-
Katyayini Kunjibettu
$4.23$2.54 -
Guruprasad Kurtakoti
$1.45$0.87 -
Prakash Garud
$3.14$1.89 -
Mohan Kuntar
$2.42$1.45 -
Purushottama Bilimale
$2.42$1.45 -
Krishna Katti
$1.93$1.16