Your Cart

Need help? Call +91 9535015489

📖 Print books shipping available only in India. ✈ Flat rate shipping

ಸುಖ ಯಾರ ಸೊತ್ತು?

Girimane Shyamarao
$0.73

Product details

Category

Articles

Author

Girimane Shyamarao

Publisher

Girimane prakashana

Language

Kannada

Book Format

Ebook

Year Published

2015

ಸುಖ ಯಾರ ಸೊತ್ತು?
(ವ್ಯಕ್ತಿತ್ವ ವಿಕಸನ)
ನಾವು ಸುಖವಾಗಿರಬೇಕೆಂಬ ಬಯಕೆ ಅತಿಯಾದಾಗ ನಮಗೇ ತಿಳಿಯದಂತೆ ಇನ್ನೊಬ್ಬರ ಸುಖವನ್ನು ಕಿತ್ತು ಮತ್ತೊಬ್ಬರ ಬದುಕನ್ನು ಮೂರಾಬಟ್ಟೆ ಮಾಡಿರುತ್ತೇವೆ. ಜಗತ್ತನ್ನು ಕಣ್ಣು ಬಿಟ್ಟು ನೋಡಿದರೆ ಹಾಗೆ ಮಾಡದೆಯೂ ಅಂದರೆ ಯಾರಿಗೂ ತೊಂದರೆ ಕೊಡದೆ, ಯಾರ ಬದುಕನ್ನೂ ಕಿತ್ತುಕೊಳ್ಳದೆಯೂ ನಾವು ಸುಖ ಪಡುವ ಎಲ್ಲಾ ದಾರಿಗಳೂ ನಮಗಿವೆ ಮತ್ತು ನಿಜವಾದ ಸುಖ ಅಡಗಿರುವುದು ಅದರಲ್ಲೇ ಎನ್ನುವುದೂ ತಿಳಿಯುತ್ತದೆ. ಅದಕ್ಕೆ ವಿದ್ಯೆ, ಬುದ್ಧಿ, ವಿವೇಚನೆ, ಹುಟ್ಟುಗುಣಗಳ ಸಹಕಾರ ಬೇಕು. ಜೊತೆಗೆ ಯಾವುದು ಸತ್ಯ, ಏನು ಮಾಡಿದ್ದರಿಂದ ಏನಾಗುತ್ತದೆ ಎಂಬ ಜಗತ್ತಿನ ನಿಯಮಗಳನ್ನು ಅರ್ಥಮಾಡಿಕೊಳ್ಳುವ ಹಂಬಲ ಬೇಕು. ಮನಸ್ಸು ಮಾಡಿದರೆ ಅವನ್ನೆಲ್ಲಾ ತಿಳಿಯುವ ಶಕ್ತಿ ನಮಗೇ ಇದೆ. ಅದು `ತಿಳಿದು ಮಾಡಿದರೆ ನಿನಗೇ ಸುಖ; ಇಲ್ಲದೆ ಇದ್ದರೆ ಮಾಡಿದ್ದನ್ನು ಅನುಭವಿಸು’ ಎಂದು ಸೃಷ್ಟಿಕರ್ತ ನಮಗೆ ಹಾಕಿದ ಒಂದು ಛಾಲೆಂಜ್!
ಸಂಸಾರ ಮುಖ್ಯವಲ್ಲ; ಸುರಸುಂದರಿ ಪತ್ನಿ ಮುಖ್ಯವಲ್ಲ; ಅಧಿಕಾರ, ಗೆಲುವು,
ಸಂಪತ್ತುಗಳೂ ಮುಖ್ಯವಲ್ಲ; ಅವೆಲ್ಲದರಿಂದ ಸಂತಸ, ನೆಮ್ಮದಿ ಸಿಗುತ್ತಾ? ಅದನ್ನು ಪಡೆವ ಕ್ರಮ ತಿಳಿದಿದೆಯಾ? ಅದು ಮುಖ್ಯ!