Your Cart

Need help? Call +91 9535015489

📖 Print books shipping available only in India. ✈ Flat rate shipping

ಭಗತ್ ಸಿಂಗ್

Ramkrishna.G
$1.09

Product details

Category

Biography

Author

Ramkrishna.G

Publisher

Nava Karnataka

Pages

160

Language

Kannada

Year Published

2021

ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ರೂಪುಗೊಂಡ ರಾಷ್ಟ್ರೀಯ ಗುರಿಗಳ ಬೆಳವಣಿಗೆಯ ಒಂದು ಹಂತದ ಕ್ರಿಯಾಶೀಲ ಸ್ವರೂಪ ಭಗತ್ ಸಿಂಗ್. ಸ್ವಾತಂತ್ರ್ಯಕ್ಕಾಗಿ ಜೀವ ಮುಡಿಪಾಗಿ‍ಟ್ಟವನು; ಆದರೆ, ಅದಷ್ಟೇ ಅಂತಿಮ ಗುರಿಯೆಂದು ಭಾವಿಸದವನು. ಒಣ ಮರಗಳನ್ನು ಕಡಿಯುತ್ತಲೇ ಹೊಸ ಬೀಜಗಳ ಬಿತ್ತನೆಯ ಬಗ್ಗೆ ಆಲೋಚಿಸಿದವನು. ಉಗ್ರ ದೇಶಪ್ರೇಮಿ. ಎಂದರೆ, ಯಾವುದೋ ಭ್ರಾಮಕ ಭವ್ಯ ಸಾಮ್ರಾಜ್ಯದ ಪ್ರೇಮಿಯಲ್ಲ; ದೇಶವೆಂಬ ಮಾನವ ಸಮುದಾಯದ ಪ್ರೇಮಿ. ನಾವು ದಾರಿ ತಪ್ಪಿದರೂ ದಿಕ್ಕುತಪ್ಪದಂತೆ ತಡೆಯಬಲ್ಲ ಧ್ರುವತಾರೆ ಭಗತ್ ಸಿಂಗ್. ಅವನ ಹೋರಾಟದ ಪರಂಪರೆಯ ಹಕ್ಕು ಪಡೆದ ಕ್ರಾಂತಿಕಾರಿ ಜನತೆಯ ದೃಷ್ಟಿಯಿಂದ ಅವನ ವ್ಯಕ್ತಿತ್ವ ಹಾಗೂ ಜೀವನದ ಕ್ರಿಯಾಸರಣಿಯ ನಿರೂಪಣೆ ಇಲ್ಲಿದೆ. ಲೇಖಕ ಡಾ||ಜಿ.ಆರ್. ನಮ್ಮ ಪರಿಸರದ ವೈಚಾರಿಕ ಚಿಂತನೆಯ ಬೆಳವಣಿಗೆಗೆ ಈಗಾಗಲೇ ನೀಡಿರುವ ಕಾಣಿಕೆಗೆ ಈ ಕೃತಿಯ ಮೂಲಕ ‘ಹೃದಯ’ ತುಂಬಿದ್ದಾರೆ. ನೈಜ ಮಾರ್ಕ್ಸ್ ವಾದಿ ಮನೋವೃತ್ತಿಯ ಎಲ್ಲಾ ಮುಖಗಳಾದ ಮಾನವಪ್ರೇಮ, ಸೈದ್ಧಾಂತಿಕ ಪ್ರಖರತೆ, ಅತ್ಯುನ್ನತ ನೈತಿಕ ಪ್ರಜ್ಞೆ, ತ್ಯಾಗ, ಧೈರ್ಯ-
ಇವೆಲ್ಲವುಗಳನ್ನೂ ಒಳಗೊಂಡಂತೆ ಇಲ್ಲಿ ಅವರು ಮೂಡಿಸಿರುವ ಭಗತ್ ಸಿಂಗ್ ನ ಚಿತ್ರಣ ನಮ್ಮೆಲ್ಲರ ಸ್ಫೂರ್ತಿಯ ಸೆಲೆಯಷ್ಟೇ ಅಲ್ಲ, ಅವನ ಹೆಸರನ್ನು ಬಂಡವಾಳವಾಗಿಸಿಕೊಳ್ಳಲು ಯತ್ನಿಸಿರುವ ಮತೀಯವಾದಿಗಳ ಕೃತಿಮ ಇತಿಹಾಸ ದರ್ಶನಕ್ಕೆ ಸವಾಲು ಸಹ ಆಗಿದೆ.