ದಿನಕ್ಕೊಂದು ಪ್ರೀತಿ ಮಾತು” ಇದು ಯಾರಿಗೆ ಬೇಡ? ಮನೆಯಲ್ಲಿದ್ದರೆ
ಜೊತೆಯವರು ಬಯಸುವುದು ಪ್ರೀತಿಯ ಮಾತುಗಳನ್ನೇ. ಹೊರಗೆ ಮಿತ್ರರು ಬಯಸುವುದು ಸ್ನೇಹದ ಮಾತುಗಳನ್ನೇ. ಸ್ನೇಹದ ಮಾತು ಎಂದರೆ ಅದೂ ಪ್ರೀತಿಯ ಮಾತುಗಳೇ ತಾನೆ? ಎಲ್ಲರಿಗೂ ಎಲ್ಲೆಡೆಯೂ ಬೇಕಿರುವುದು ಪ್ರೀತಿಯ ಮಾತು ಎಂಬುದನ್ನು ಮರೆಯದಿರಿ.
ದ್ವೇಷವನ್ನು ತಡೆದುಕೊಳ್ಳುವ ಶಕ್ತಿ ಎಂತಹವರಿಗೂ ಹುಟ್ಟಿಬಿಡುತ್ತದೆಯಂತೆ. ಆದರೆ ಪ್ರೀತಿಯನ್ನು ಬಹುಕಾಲ ಉಪೇಕ್ಷಿಸಿ ಬದುಕುವ ಶಕ್ತಿ ಯಾವ ಜೀವಿಗೂ ಕಷ್ಟವೇ! ಅಂತೆಯೇ ಸತ್ಯೇಶ್ ಅವರ ಜೀವನಾನು ಭವಗಳಿಂದ ಸ್ಪುರಿಸುವ ಪ್ರೀತಿ ಮಾತುಗಳನ್ನ ಓದುತ್ತಾ ಹೋದಾಗ ಎಂತಹವರ ಹೃದಯವೂ ಆರ್ದ್ರವಾಗುವುದರಲ್ಲಿ ಸಂದೇಹವೇ ಇಲ್ಲ.
ಆದರೆ ಇಲ್ಲಿ ಆಗಿರುವುದು ಇದಕ್ಕೂ ಒಂದು ಕೈ ಮೇಲೆ ಎನ್ನಬಹುದು. ಸತ್ಯೇಶ್ ಅವರ ಪ್ರೀತಿ ಸಾಲುಗಳಿಗೆ ಅವರ ಸ್ನೇಹಿತೆಯಾದ, ‘ಸುಜಾತ ಎನ್ ಮಾಗಳ್’ ಅವರ ಭಾವ ಸ್ಪಂದನ. ಒಂದು ಪ್ರೀತಿಯ ನೋಟಕ್ಕೆ ಮತ್ತೊಂದು ನಾಚಿಕೆಯ ನಗು ಪೋಣಿಸಿದಾಗ ಉಂಟಾಗುವ ಸಂಚಲನದಂತೆ. ಇಲ್ಲಿ ಪ್ರತಿ ಪ್ರೀತಿ ಮಾತಿಗೂ ಸುಜಾತ ಅವರ ಭಾವ ಪರಿಧಿಯಿಂದ ಜಾರಿದ, ಹರಿಯುವ ಸಿಹಿ ನೀರ ಝರಿಯಷ್ಟೇ ನಿಷ್ಕಲ್ಮಶ ನೇರ ಪ್ರತಿ ಮಾತುಗಳು ಓದಿಸಿಕೊಳ್ಳುತ್ತಾ ನಮ್ಮನ್ನೂ ಆ ಜುಗಲ್ಬಂಧಿಯಲ್ಲಿ ಸೆಳೆದುಕೊಳ್ಳುತ್ತಾ ಹೋಗುತ್ತವೆ.

Additional information

Category

Author

Publisher

Book Format

Ebook

Pages

108

Language

Kannada

Year Published

2023

Reviews

There are no reviews yet.

Only logged in customers who have purchased this product may leave a review.