ಜೀವನದ ಈ ಸಂಧ್ಯಾಕಾಲದಲ್ಲಿ ನನ್ನ ಕಾಲಪಥದಲ್ಲಿ ನಾನು ನಡೆಯುತ್ತಾ ಇದ್ದಾಗ ಸಂಧಿಸಿದ ವ್ಯಕ್ತಿಗಳ, ಆಗಿ ಹೋದ ಘಟನೆಗಳ ನೆನಪುಗಳು ಮರಳಿ ?ಬರುತ್ತವೆ. ನಾನು ಸತ್ತ ಮೇಲೆ ಇವೂ ನನ್ನೊಡನೆ ಸಾಯುತ್ತವೆ. ಅವು ಹಾಗಾಗದಂತೆ, ಬರೆದಿಟ್ಟರೆ ಅವು ಇತರರಿಗೆ ಇಷ್ಟವಾಗಬಹುದು ಎಂಬ ಭಾವನೆಯಿಂದ ಈ ನೆನಪುಗಳನ್ನು ದಾಖಲೆ ಮಾಡುತ್ತಿದ್ದೇನೆ.
– ಪಡುಕೋಣೆ ಪ್ರಭಾಶಂಕರ
ತೇಲಿ ಬಂದ ಎಲೆಗಳು ( Ebook )
$0.48
ತೇಲಿ ಬಂದ ಎಲೆಗಳು
ದಿ. ಪಡುಕೋಣೆ ರಮಾನಂದರಾಯರ ‘ಹುಚ್ಚು ಬೆಳುದಿಂಗಳಿನ ಹೂಬಾಣಗಳು’ ಗ್ರಂಥಮಾಲೆಯ ಹಳೆಯ ಚಂದಾದಾರರಿಗೆ ಬಹಳ ಮೆಚ್ಚುಗೆಯಾದ ಕೃತಿ. ಅವರು ತಮ್ಮ ವೃದ್ಧಾಪ್ಯದಲ್ಲಿ ತಮ್ಮ ಮಗ-ಪ್ರಭಾಶಂಕರ-ಅವರ ಹತ್ತಿರವೇ ಇರುತ್ತಿದ್ದರು. ಮುಂಬಯಿ ಹಾಗೂ ಬೆಂಗಳೂರಲ್ಲಿ ವಾಸವಾಗಿದ್ದರು. ಆ ಕಾಲದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಲೇಖಕರ ಹಾಗೂ ಇತರ ಕಲಾವಿದರ ಜೊತೆಗಿನ ಅನುಭವಗಳನ್ನು ಬರೆದು ಇಟ್ಟಿದ್ದರು, ಅದನ್ನು ನಮಗೆ ಕಳಿಸುವ ಮೊದಲೇ ಅವರು ತೀರಿಕೊಂಡರು. ಅವರ ಮಗ-ಮಹೇಶ ಪಿ. ಪಡುಕೋಣೆಯವರು-ತಂದೆಯವರ ಹಸ್ತಪ್ರತಿಯನ್ನು ಶ್ರೀ ಜಯಂತ ಕಾಯ್ಕಿಣಿಯವರ ಮುಖಾಂತರ ಕಳುಹಿಸಿ, ಪ್ರಕಟಿಸಲು ಸಾಧ್ಯವೇ? ಎಂದು ಕೇಳಿದರು. ಗ್ರಂಥಮಾಲೆಯ ಚಂದಾದಾರರಿಗೆ ಈ ಕೃತಿಯನ್ನು ನೀಡಲು ಅತ್ಯಂತ ಸಂತೋಷವೆನಿಸುತ್ತದೆ.
- Category: Short Essay
- Publisher: Manohara Granthamala
- Language: Kannada
- Book Format: Ebook
- Year Published: 2016
Only logged in customers who have purchased this product may leave a review.
Reviews
There are no reviews yet.