
ಆತ್ಮ ವೃತ್ತಾಂತ
Rajani Narahalli$3.63 $2.18
Product details
Category | Novel |
---|---|
Author | Rajani Narahalli |
Publisher | Manohara Granthamala |
Language | Kannada |
Book Format | Ebook |
Pages | 414 |
Year Published | 2013 |
ಆತ್ಮವೃತ್ತಾಂತ
ಲೇಖಕಿ ರಜನಿ ನರಹಳ್ಳಿ ಅವರ ಪ್ರಸ್ತುತ ಕೃತಿ ‘ಆತ್ಮವೃತ್ತಾಂತ’ ಹಲವು ಕಾರಣಗಳಿಗಾಗಿ ಪ್ರಮುಖವೆನಿಸುತ್ತದೆ. ರಜನಿ ನರಹಳ್ಳಿಯವರು ಬರೆದ ಈ ಕಾದಂಬರಿಯ ವಸ್ತು ಒಂದು ನಾಯಿಯ ಬಾಳು. ಜತೆಗೆ ಅದರ ಹಿಂದಿನ ಮೂರು ತಲೆಮಾರಿನ ನಾಯಿಗಳ ಆತ್ಮಕತೆಗಳೂ ಈ ಕಾದಂಬರಿಯಲ್ಲಿದೆ. ಬುದ್ಧಿವಂತರೆಂದು ಸ್ವಯಂ ಘೋಷಿಸಿಕೊಂಡಿರುವ ಮನುಷ್ಯರ ಬದುಕನ್ನು ಒಮ್ಮೆ ಪ್ರಾಣಿಯ ಮೂಲಕ ನೋಡಲು ಶುರುಮಾಡಿದರೆ ಇಷ್ಟೊಂದು ಸತ್ಯಗಳು ಗೋಚರಿಸುತ್ತವೆಯೇ ಎಂದು ಸೋಜಿಗ-ಗಾಬರಿ ಆಗುತ್ತವೆ . ಲಿಯೋ ಎಂಬ ಸಾಕುನಾಯಿಯ ಬದುಕಿನ ಸುದೀರ್ಘ ಕಥನವಿದು. ಸಕಲ ಜೀವಜಾತರ ಬದುಕಿನ ರೂಪಕವಾಗಿ ಇಲ್ಲಿ ಲಿಯೋ ಮಾತಾಡಿದೆ. ಮುಖ್ಯವಾಗಿ ಇಲ್ಲಿ ಕಾಣುವುದು ತಾನು ಸಾಕಿದ ನಾಯಿಯೊಂದಿಗೆ ಲೇಖಕಿ, ಸಾಕು ತಾಯಿ-‘ಅಮ್ಮ’-, ಹೊಂದಿದ ಅನ್ಯಾದೃಶ ಆಪ್ತತೆ, ತಾದಾತ್ಮ್ಯ ಪ್ರೀತಿ. ಇಂಥ ಅಪೂರ್ವ ತಾದಾತ್ಮ್ಯದಿಂದಾಗಿಯೇ ಅನುಬಂಧ ಹಾಗೂ ಸಂವೇದನೆಯ ಒಂದು ಅರ್ಥಪೂರ್ಣ ವ್ಯಾಖ್ಯಾನ ಇಲ್ಲಿ ವಿಸ್ಮಯಕಾರಿಯಾಗಿ ಅರಳಿದೆ. ಪರಮಾನಸ ಪ್ರವೇಶ ಅಷ್ಟೇ ಅಲ್ಲ ಪರಮಾನಸಕ್ಕೆ ರೂಪಾಂತರಗೊಂಡ ಮನಸ್ಸಿನಿಂದಾಗಿ ಮನುಷ್ಯಜಗತ್ತಿನ ಮಾತುಗಳೂ ಕೂಡಿ ಈ ಕೃತಿ ನಾವು ಕಾಣುವ ಮತ್ತು ಗ್ರಹಿಸುವ ಸಾಮಾನ್ಯ ನೆಲೆಯನ್ನೇ ಬದಲಿಸಿ ಇನ್ನೊಂದೇ ಪಾತಳಿಯ ಅರಿವು ತೆರೆಯಿಸುತ್ತದೆ. ತನ್ನ ಜಗತ್ತನ್ನು ಪರಜಗತ್ತಿನೊಂದಿಗೆ ಬೆಸೆದುಕೊಳ್ಳುವಲ್ಲಿನ ನೋವು, ನಲಿವು, ತಬ್ಬಿಬ್ಬು, ಸಂಕಟ, ಅಗಲಿಕೆಗಳ ತೀವ್ರತೆ, ಹೋರಾಟಗಳನ್ನು ಲಿಯೊ ನೆಪದಲ್ಲಿಯೂ ನೆನಪಲ್ಲಿಯೂ ಲವಲವಿಕೆಯ ಶೈಲಿ ಮುದಗೊಳಿಸುವ ಮೃದುಹಾಸ್ಯದೊಂದಿಗೇ ಕೃತಿ ಅಪಾರ ಶ್ರದ್ಧೆಯಿಂದ ನಿರೂಪಿಸುತ್ತದೆ. ಇದನ್ನು ಓದಿದ ಮೇಲೆ ನಾಯಿಯೊಂದು ‘ಕೇವಲ’ ‘ನಾಯಿ’ಯಷ್ಟೇ ಅಂತನಿಸಲು ಸಾಧ್ಯವೇ ಇಲ್ಲ. ನಾಯಿ ಮಾತ್ರವಲ್ಲ; ಯಾವ ಪ್ರಾಣಿಯೂ. ಯಾರೂ ಮುಖ್ಯರಲ್ಲ, ‘ಯಃಕಶ್ಚಿತ್ ಹುಳವೂ’ ಅಮುಖ್ಯವಲ್ಲ ಎಂಬುದನ್ನು ತನ್ನದೇ ರೀತಿಯಲ್ಲಿ ಹೃದಯಸ್ಪರ್ಶಿಯಾಗಿ ಅಹುದಹುದೆನ್ನುವಂತೆ ಚಿತ್ರಿಸಿದ ಇದೊಂದು ಕನ್ನಡ ಕಂಡ ಅಪರೂಪದ ಕೃತಿಯೇ ಸರಿ.
Customers also liked...
-
Na. Mogasale
$2.72$1.63 -
Nagesh Kumar C S
$0.83$0.51 -
Raghavendra Patil
$2.06$1.23 -
Na. Damodara Shetty
$0.85$0.51 -
U.R. Ananthamurthy
$6.00 -
Vivek Shanbhag
$8.00