Your Cart

Need help? Call +91 9535015489

📖 Print books shipping available only in India. ✈ Flat rate shipping

ಯಯಾತಿ

Girish Karnad
$0.64

Product details

Category

Plays

Author

Girish Karnad

Publisher

Manohara Granthamala

Language

Kannada

ISBN

81-88478-25-03

Book Format

Ebook

Year Published

2011

ಕೀರ್ತಿನಾಥ ಕುರ್ತಕೋಟಿ ಅವರ ಸಲಹೆ-ಸೂಚನೆಯ ಮೇರೆಗೆ ’ಯಯಾತಿ’ ಮೊದಲ ಬಾರಿಗೆ ೧೯೬೧ರಲ್ಲಿ ಪ್ರಕಟವಾಗಿತ್ತು.ನಾಲ್ಕು ಅಂಕಣಗಳಲ್ಲಿ ಇರುವ ‘ಯಯಾತಿ’ ಮಹತ್ವದ ರಂಗಕೃತಿಗಳಲ್ಲಿ ಒಂದು. ಈ ನಾಟಕದಲ್ಲಿ ಬಳಕೆಯಾದ ಭಾಷೆ ಅದರ ಮಹತ್ವವನ್ನು ಹೆಚ್ಚಿಸಿದೆ.
ಯಯಾತಿ, ಪುರು, ದೇವಯಾನಿ, ಶರ್ಮಿಷ್ಠೆ ಹಾಗೂ ಚಿತ್ರಲೇಖೆ ಈ ನಾಟಕದ ಪ್ರಮುಖ ಪಾತ್ರಗಳು. ಯಯಾತಿ ಮಹಾರಾಜ ತನ್ನ ಈಡೇರಡದ ಕನಸುಗಳನ್ನು ಸಾಕಾರ ಮಾಡಲು ಮಗ ಪುರುವಿನ ಯೌವನ ಪಡೆಯುತ್ತಾನೆ. ತಂದೆಗೆ ತನ್ನ ಯೌವನ ನೀಡಿದ ಪುರುವಿಗೆ ಅಕಾಲ ವೃದ್ಧಾಪ್ಯ. ಪುರುವಿನ ನವಪತ್ನಿ ಚಿತ್ರಲೇಖೆ ಈ ನಾಟಕದ ವಿಶೇಷ-ಜೀವಂತಿಕೆ ಇರುವ ಪಾತ್ರ.
ತರ್ಕದ ಉರುಳಿನಲ್ಲಿ ಯಯಾತಿಯನ್ನು ಕಟ್ಟಿ ಹಾಕುವ ಚಿತ್ರಲೇಖೆಯ ಸ್ವಂತಿಕೆ ಮೆಚ್ಚುಗೆಗೆ ಪಾತ್ರವಾಗದೇ ಇರದು. ಮೊದಲ ಕೃತಿಯಲ್ಲಿಯೇ ಸೊಗಸಾದ ರಂಗಶಿಲ್ಪದ ಆಕೃತಿ ಕಟ್ಟಿಕೊಟ್ಟಿರುವ ಗಿರೀಶ್ ಕಾರ್ನಾಡ್ ಅವರಿಗೆ ಈ ನಾಟಕ ರಚನೆಗೆ ಅಸ್ತಿತ್ವವಾದದ ಪ್ರೇರಣೆ ಆಗಿದೆ. ಪೌರಾಣಿಕ ಕತೆ- ಪಾತ್ರಗಳಿಗೆ ಆಧುನಿಕ-ಸಮಕಾಲೀನತೆಯ ಸ್ಪರ್ಶ ನೀಡಿರುವುದು ಹಾಗೂ ವಿಭಿನ್ನ ಓದಿಗೆ ಅನುವು ಮಾಡಿಕೊಡುವುದು ಈ ನಾಟಕದ ವಿಶೇಷ.