Ebook

ಹೆಣ್ಣಾಲದ ಮರ

Original price was: $1.44.Current price is: $0.86.

ಒಂದು ಸಾಮಾನ್ಯ ಸಂದರ್ಭವನ್ನು ಕವಿತೆಯ ನೆಲೆಗೆ ಎತ್ತುವ ಶಕ್ತಿಯನ್ನು ಸುಮತಿ ಪಡೆದಿದ್ದಾರೆ. ಅವರ ಭಾಷೆಯಲ್ಲಿ ಹಿಂದಿನ ಮತ್ತು ಇಂದಿನ ಪದಗಳ ಹದವಾದ ಸಂಯೋಗವಿದೆ. ಈಚಿನ ದಿನಗಳಲ್ಲಿ ಅಪರೂಪವಾಗಿರುವ ಲಯ ಅವರ ಕವಿತೆಗಳಲ್ಲಿ ಎದ್ದುಕಾಣುವಂತಿದೆ. ಸಹಜವಾಗಿ ಅವರು ಚಿತ್ರಗಳನ್ನು ಕಟ್ಟಬಲ್ಲರು. ಇವೆಲ್ಲಾ ಓರ್ವ ಕವಿಗೆ ಅಗತ್ಯವಾದ ಕಾವ್ಯಾಂಶಗಳು. ಹೀಗಾಗಿ ಕವಿಯ ಭವಿಷ್ಯದ ಬಗ್ಗೆ ಭರವಸೆ ಸಹಜವಾಗಿಯೇ ಮೂಡುತ್ತಿದೆ.
ಹೆಣ್ಣಾಲದ ಮರ ಸುಮತಿ ತಾಯಿಯ ಬಗ್ಗೆ ಬರೆದ ಒಂದು ಪದ್ಯ.ತಂದೆಯೊಂದಿಗೆ ಮುಖಾಮುಖಿಯಾಸಿಗಿ ಈ ಪದ್ಯವನ್ನು ರಚಿಸಿರುವುದರಿಂದ ಕವಿತೆಗೆ ನವೀನವಾದ ಪಾಕ ಸಿದ್ಧಿಸಿದೆ. ಬೆರಗು ಪದ್ಯದಲ್ಲಿ ವಯಸ್ಸಾದ ವೃದ್ಧ ತನ್ನ ಬಾಲ್ಯದ ನೆನಪುಗಳಿಂದ ಮುಪ್ಪನ್ನು ಅರೆಗಳಿಗೆ ಮರೆತು ಮತ್ತೆ ಬಾಲಕನಾಗುವ ಚೋದ್ಯದ ವರ್ಣನೆ ಹೃದಯಂಗಮವಾಗಿ ಬಂದಿದೆ. ಗೋಕುಲದಲ್ಲಿ ಪುರಾಣವಸ್ತುವನ್ನು ಅತ್ಯಾಧುನಿಕಗೊಳಿಸುವ ಬೆರಗಿದೆ.

Additional information

Category

Author

Publisher

Book Format

Ebook

Language

Kannada

Pages

100

Year Published

2023

Reviews

There are no reviews yet.

Only logged in customers who have purchased this product may leave a review.