Your Cart

Need help? Call +91 9535015489

📖 Print books shipping available only in India. ✈ Flat rate shipping

ಲೋಕಾಂತದ ಕಾವು

Mohan Kuntar
$1.45

Product details

Category

Poetry

Author

Mohan Kuntar

Publisher

Yaji Prakashana

Language

Kannada

Book Format

Printbook

`ಲೋಕಾಂತದ ಕಾವು’ ಸಂಕಲನದ ಕವಿತೆಗಳನ್ನು ಓದಿದಾಗ – ಕುಂಟಾರ್ ಅವರ ಮೇಲೆ ಕನ್ನಡ `ನವ್ಯ’ ಕಾವ್ಯದ ಪ್ರಭಾವವಿದೆಯಾದರೂ ಅವರ ಒಲವು ಹೆಚ್ಚಾಗಿ `ನವೋದಯ’ದ ಆಶಯಗಳು ಮತ್ತು ಶೈಲಿಯ ಕಡೆಗೇ ಇದೆ. ಛಂದೋಬದ್ಧವಾಗಿ ಭಾವಗೀತೆಯ ರೀತಿಯಲ್ಲಿ ಅವರು ಬರೆದಿರುವ ಕವಿತೆಗಳು ಹೆಚ್ಚು ಆಕರ್ಷಕವಾಗಿವೆ. ಇಲ್ಲಿನ ಹಲವು ಉತ್ತಮ ಕವಿತೆಗಳ ಮೂಲಧಾತು ಸಮಕಾಲೀನ ಸ್ಪಂದನ. ಕಾವ್ಯದ ಆಕೃತಿಯ ನೆಲೆಯಿಂದ ಈ ಸಂಕಲನ ಒಂದು ಅಧ್ಯಯನ ಯೋಗ್ಯ ಪಠ್ಯ ವಾಗುತ್ತದೆ. ಇಲ್ಲಿ ನವೋದಯದ ಪ್ರಕೃತಿ ಗೀತೆಯಿಂದ ಹಿಡಿದು, ನಾಡಿನುಡಿಯ ಅಭಿಮಾನದ ಕವಿತೆಗಳನ್ನು ಒಳಗೊಂಡ ಮೂರು, ನಾಲ್ಕು ಸಾಲಿನ ಮಾತ್ರಾಲಯದ ಮಾದರಿಗಳು, ಕಥನಕವನಗಳು, ನವ್ಯದ ಮುಕ್ತಛಂದದ ವ್ಯಕ್ತಿನಿಷ್ಠ ಅಭಿವ್ಯಕ್ತಿಗಳು, ದ್ವಿಪದಿಗಳು, ಚೌಪದಿಗಳು, ಹನಿಗವನಗಳು, ಅಣಕುಗಳವರೆಗೆ ಹಲವು ಮಾದರಿಯನ್ನು ಕಾಣಬಹುದಾಗಿದೆ.