• -40%

    ಅನಾಥ ಹಕ್ಕಿಯ ಕೂಗು

    0

    ‘ಅನಾಥ ಹಕ್ಕಿಯ ಕೂಗು’ ಒಂದು ಮನೋವೈಜ್ಞಾನಿಕ ಕಾದಂಬರಿ. ಹೆತ್ತವರಿದ್ದೂ ತಬ್ಬಲಿಯಾದ ಮಕ್ಕಳ ಬದುಕು ಸಂಕಟಕ್ಕೆ ಬಿದ್ದರೆ ಅದರ ನೋವು ತಟ್ಟುವುದು ಕೊನೆಗೂ ಹೆತ್ತವರಿಗೇ. ಅದರಲ್ಲೂ ಅಮ್ಮನಿಗೆ! ಏಕೆಂದರೆ ಹತ್ತು ತಿಂಗಳು ಹೊಟ್ಟೆಯಲ್ಲಿಟ್ಟು ಬೆಳೆಸಿದ ಅವಳದೇ ಒಂದು ಭಾಗ ಅದು. ನಂತರ ಅದರ ರಕ್ಷಣೆಗೆ ನಿಲ್ಲಬೇಕಾದ ಅಪ್ಪನಿಗೆ! ಇಬ್ಬರ ಪ್ರೀತಿಯೂ ಸಿಗದೆ ಹೋದರೆ ಮಗುವಿನ ಗತಿ? ‘ಹೆತ್ತವರ ಪ್ರೀತಿ ಇಲ್ಲದೆ ಬೆಳೆದ ಮಗು ಸಮಾಜಘಾತಕರಾಗಬಹುದು’ ಎಂದು ಎಚ್ಚರಿಸುತ್ತಾರೆ ಮನಃಶಾಸ್ತ್ರಜ್ಞರು. ‘ಬೇರೇನೂ ದಾರಿಯಿಲ್ಲ; ಬದುಕೇ ಘೋರವಾಗುತ್ತದೆ’ ಎನ್ನುವ ಸಂದರ್ಭದ ಹೊರತಾಗಿ ಡಿವೋರ್ಸ್ ಪಡೆದುಕೊಳ್ಳಬೇಕಾದರೆ ನೂರು ಬಾರಿ ಯೋಚಿಸಬೇಕು. ಹಾಗಿಲ್ಲವಾದರೆ ಆಗುವ ಪರಿಣಾಮಗಳ ಬಗ್ಗೆ ಒಂದು ಚಿತ್ರ ಇದರಲ್ಲಿ ಸಿಗಬಹುದು. ಎಲ್ಲ ಮಕ್ಕಳಿಗೂ ಹೀಗೇ ಆಗುತ್ತದೆ ಎಂದಲ್ಲ; ಹೀಗಾಗುವ ಸಾಧ್ಯತೆ ಹೆಚ್ಚು!

    Original price was: $1.56.Current price is: $0.94.
    Add to basket