• -40%

    ಅಂತರಂಗಯಾನ

    0

    ಅಂತರಂಗಯಾನ
    ಹೈಕುಗಳು ಸಹೃದಯರ ಹೃದಯವನ್ನು ಹಾಯ್ದು ಒಳನುಗ್ಗಿ ಚಿರವಾಗಿ ಅಲ್ಲೇ ಸೆರೆಯಾಗಿರಬಲ್ಲವು. ಏಕೆಂದರೆ ಇಲ್ಲಿನ ಕಾವ್ಯದ ವಿಚಾರಗಳಿಗೆ ಭಾವನೆಗಳಿಗೆ ಕಾಲವನ್ನು ಮೀರಿ ನಿಲ್ಲುವ ಸತ್ಯದ ಸ್ಪರ್ಶಗುಣವಿದೆ.
    ಈ ಕೃತಿಯಲ್ಲಿನ ವಿಷಯ ವ್ಯಾಪ್ತಿಯ ಹರಹು ತುಂಬ ವಿಶಾಲವಾದುದು. ಸೃಷ್ಟಿಯಲ್ಲಿನ ಪ್ರಕೃತಿ ಪರಿಸರದಿಂದ ಮೊದಲ್ಗೊಂಡು ದಿನಬಳಕೆಯ ಅತ್ಯಂತ ಪರಿಚಿತ ಸಾಮಾನ್ಯ ಸಂಗತಿಗಳವರೆಗೂ ಈ ಹೈಕುಗಳು ನಮ್ಮೊಂದಿಗೆ ಆಪ್ತವಾಗಿ ಸಂಭಾಷಿಸುತ್ತವೆ. ಊದುಕಡ್ಡಿ,, ಇರುವೆ, ಸೌಟು, ಕುಕ್ಕರ್, ಸಾಬೂನುಗುಳ್ಳೆ, ಗಾಳಿಪಟ…. ಕಡೆಗೆ ಸೋಪಿನಲ್ಲಿ ಸಿಕ್ಕ ಕೂದಲೆಳೆ… ಅದೇನೇ ಇರಲಿ, ಇವೆಲ್ಲ ಯಾವುದೊ ತತ್ವವೊಂದನ್ನು ಬಿಂಬಿಸುವ ಸತ್ವಶಾಲಿ ಸಾಲುಗಳಾಗಿ ಪರಿಣಮಿಸಿಬಿಡುತ್ತವೆ. ಅತಿಬಳಕೆಯಿಂದಾಗಿ ಗಮನಕ್ಕೇ ಬಾರದ ವಿಷಯವಸ್ತು ಕೂಡ ಇಲ್ಲಿ ಓದುಗನ ಗಮನ ಸೆಳೆದು ಸೃಷ್ಟಿವೈಚಿತ್ರ್ಯಕ್ಕೆ ನನ್ನ ನಮನ ಸಲ್ಲಿಸಿಬಿಡುತ್ತದೆ. ಇದು ನಿಜಕ್ಕೂ ಕವಯತ್ರಿಯಲ್ಲಿರುವ ಕಾವ್ಯ ಕೈಚಳಕವೇ ಸರಿ!

    Original price was: $0.60.Current price is: $0.36.
    Add to basket