ಹೊಡಿ ಚಕ್ಕಡಿ
ಹಿಂದುಳಿದ ವರ್ಗದ ವಿದ್ಯಾರ್ಥಿಗಳ ನರಕ ಸದೃಶ ಹಾಸ್ಟೆಲ್ಲಿನ ಕಥೆಯನ್ನು ಸಮಕಾಲೀನ ರಾಜಕೀಯ, ಜಾತಿಯ ವಿಷ, ಬುದ್ಧಿಜೀವಿ ಸೋಗಲಾಡಿತನ, ಡಾಂಭಿಕ ಆಧ್ಯಾತ್ಮಿಕತೆ ಮತ್ತು ಮಾನವಂತ ಸಮಾಜಕ್ಕೆ ಇರಬೇಕಾದ ಕನಿಷ್ಠ ನೈತಿಕತೆಗಳ ಗೈರುಹಾಜರಿಯನ್ನು ‘ಹಸಿವೆಯೆ ನಿಲ್ಲು ನಿಲ್ಲು’ ಕಥೆ ಕಟುವ್ಯಂಗ್ಯ, ಹರಿತ ಭಾಷೆಯ ಟೀಕೆ ಟಿಪ್ಪಣಿ, ನೈತಿಕ ವ್ಯಾಖ್ಯಾನಗಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಅತಿ ಬರವಣಿಗೆಯಂತೆ ಕಾನಬಹುದಾದ ಶೈಲಿಯೇ ಬಸು ಬೇವಿನಗಿಡದ ಅವರ ಈ ಕಥೆಯ ಯಶಸ್ಸಿಗೆ ಕಾರಣವಾಗಿದೆ.