• -40%

    ಸ್ತ್ರೀ ಎಂದರೆ ಅಷ್ಟೇ ಸಾಕೆ

    0

    ಸ್ತ್ರೀ ಎಂದರೆ ಅಷ್ಟೇ ಸಾಕೆ
    ವಿಚಾರ ವಿಮರ್ಶಾ ಲೇಖನಗಳು
    ಡಾ. ಎಚ್ ಎಲ್ ಪುಷ್ಪ ಅವರ ‘ಸ್ತ್ರೀ ಅಂದರೆ ಅಷ್ಟೇ ಸಾಕೆ’ ಕೃತಿಯು ಸ್ತ್ರೀಕೇಂದ್ರಿತ ಬರವಣಿಗೆಯಾಗಿದ್ದು, ಅವರೇ ಹೇಳುವಂತೆ ಇಲ್ಲಿನ ಲೇಖನಗಳು ಬೇರೆ ಬೇರೆ ಸಂದರ್ಭ ಗಳಲ್ಲಿ ಸಿದ್ಧವಾಗಿವೆ. ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಲೇಖನಗಳು, ಆಡಿದ ಮಾತುಗಳ ಲೇಖನ ರೂಪಗಳೆಲ್ಲವೂ ಈ ಕೃತಿಯಲ್ಲಿ ಸೇರಿವೆ. 
    ಸ್ತ್ರೀ ಸಂವೇದನೆ, ಚಿಂತನೆ, ಸಾಹಿತ್ಯದ ಮೇಲಿನ ಚರ್ಚೆ, ವಿಮರ್ಶೆಗಳು ಮದ್ದು ಹುಡುಕುವುದಕ್ಕಿಂತ ಹೆಚ್ಚು ಕುಂದು ಕೇರುವುದರಲ್ಲೇ ನಿರತವಾಗಿವೆ. ಆದ್ರೆ ಎಚ್ ಎಲ್ ಪುಷ್ಪ ಅವರಿಗೆ ಕುಂದು ಕೇರುವುದರಿಂದ ಜಾಡ್ಯ ಹರಿಯುವುದಿಲ್ಲ ಎಂದು ಖಚಿತವಾಗಿ ತಿಳಿದಂತಿದೆ. ಹಾಗಾಗಿ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಓದುವಾಗ ಈವರೆಗಿನ ಉಸಿರು ಬಿಗಿತದಿಂದ ಬಿಡುಗಡೆಗೊಂಡ ಅನುಭವವಾಗುತ್ತದೆ.
    ಬೆಡಗಿನ ವಚನಕಾರ್ತಿಯರಿಂದ ಮೊದಲಗೊಂಡು ಬಿ ಟಿ ಜಾಹ್ನವಿಯವರೆಗೆ, ಕಾರಂತರ ಮೈಮನಗಳ ಕಡಲ ಸುಳಿಯಿಂದ ಹಿಡಿದು ಮಹಾದೇವರ ದೇವನೂರಿನ ಸ್ತ್ರೀ ಬಯಲಿನವರೆಗೆ ಕನ್ನಡ ಸಾಹಿತ್ಯ ಶರಧಿಯ ಹಿರಿ-ಕಿರಿಯ ಬಂದರುಗಳಲ್ಲೆಲ್ಲಾ ಲಿಂಗಭೇಧವಿಲ್ಲದೆ ಲಂಗರು ಹಾಕಿ ಈವರೆಗೂ ಅವರಿವರು ಕಾಣದ್ದನ್ನು ಕಣ್ಣಿಗೆ ತುಂಬಿಕೊಂಡು ಯಾವ ಯಗಟು-ಒಗಟುಗಳಿಲ್ಲದೆ ಮಾಡಿದ ಪಕ್ಕಾ ಸಿದಾಸಾದ ಸಿರಿವಂತ ಮಂಡನೆ ಇಲ್ಲಿದೆ.ದತ್ತ ಓದು, ಪಕ್ವನೋಟ, ಪಕ್ಷಪಾತ, ವಕೀಲಿಗಳಿಲ್ಲದ ಇಲ್ಲಿಯ ದಿಟ್ಟ ಬರಹಗಳು ಅನನ್ಯ ಒಳನೋಟದಿಂದಾಗಿ ಓದುಗರನ್ನು ತಟ್ಟುತ್ತವೆ.

    Original price was: $2.40.Current price is: $1.44.
    Add to basket