ನದಿ ಸಂರಕ್ಷಣೆಗೆ ಶ್ರಮಿಸುತ್ತಿರುವ ಜಲಮಿತ್ರರಿಗೆ ರಾಜ್ಯದ ನದಿ ಪರಿಸರ ಪರಿಸ್ಥಿತಿ ಕುರಿತ ಪುಸ್ತಕ. ನದಿ ನೋಡಲು ಇರುವ ಅವಕಾಶಗಳನ್ನು ಇಲ್ಲಿ ವಿವಿಧ ಮುಖಗಳಲ್ಲಿ ಗಮನಿಸಬಹುದು ಜೀವ ನದಿಗಳನ್ನು ಮರೆತು ಹೆದ್ದಾರಿ ವೇಗದ ಅವಸರದಲ್ಲಿ ಓಡುವವರನ್ನು ಸ್ವಲ್ಪ ನಿಲ್ಲಿಸಿ ನದಿಯ ಮಾತನ್ನು ಎದೆಗೆ ತಲುಪಿಸುವ ಪುಟ್ಟ ಪ್ರಯತ್ನ ಶಿವಾನಂದ ಕಳವೆ ಅವರು ಮಾಡಿದ್ದಾರೆ.