• -40%

    ಹೇಮಾವತಿ ತೀರದ ಕೌತುಕ ಕತೆಗಳು

    0

    ಇದು ಸಾವಿರದ ಒಂಭೈನೂರಾ ತೊಂಭತ್ತರ ದಶಕದ ಆಚೀಚೆ ಹುಟ್ಟೂರಿನ ಹಳ್ಳಿ ಮತ್ತು ಅದನ್ನು ಬಿಟ್ಟು ಪೇಟೆ ಸೇರಿದ ಸಂದರ್ಭಗಳಲ್ಲಿ ಹೇಮಾವತಿ ನದಿಯ ಅಕ್ಕ-ಪಕ್ಕ ನಡೆದ ಘಟನೆಗಳ ಮಲೆನಾಡಿನ ಚಿತ್ರಣ. ಮಲೆನಾಡಿನ ರೋಚಕ ಕತೆಗಳ ಮತ್ತೊಂದು ಭಾಗ.
    ನಮ್ಮ ಸುತ್ತ-ಮುತ್ತ ದಿನನಿತ್ಯವೂ ನಡೆಯುವ ಘಟನೆಗಳಲ್ಲಿ ನಮಗೆ ಸಂಬಂಧ ಪಟ್ಟಿದ್ದು, ಪಡದಿರುವುದು ಎರಡೂ ಇರುತ್ತದೆ.
    ಅದರಲ್ಲೂ ಪ್ರಾಣಿ, ಪಕ್ಷಿ, ನದಿ, ಗುಡ್ಡ-ಬೆಟ್ಟ, ಕಾಡು, ಮಳೆ, ಮಂಜುಗಳಿರುವ ಮಲೆನಾಡಿನಲ್ಲಿ ನಡೆಯುವ ಘಟನೆಗಳು ಯಾವತ್ತೂ ವಿಶೇಷವೇ. ಕೆಲವು ನಮ್ಮ ಗಮನಕ್ಕೇ ಬಾರದಿದ್ದರೆ ಕೆಲವೊಂದಕ್ಕೆ ನಾವು ಮೂಕ ಪ್ರೇಕ್ಷಕರು. ಅವು ನಮ್ಮಲ್ಲಿ ಯಾವ ಭಾವನೆಗಳನ್ನೂ ಹುಟ್ಟು ಹಾಕುವುದಿಲ್ಲ. ಕೆಲವು ನಮ್ಮ ಮನ ಕಲಕಿದರೆ ಇನ್ನು ಕೆಲವು ನೇರ ನಮಗೇ ಸಂಬಂಧಪಟ್ಟಿದ್ದಾಗಿ ಅದರ ಸಂತಸ, ನೋವು, ದುಗುಡ, ದುಮ್ಮಾನಗಳು ನಮ್ಮನ್ನೇ ಬಾಧಿಸುತ್ತವೆ; ನಲಿಸುತ್ತವೆ. ನಮ್ಮದು ನಮಗೆ ಬೇಗ ಅರ್ಥವಾಗುತ್ತದೆ. ಅಂತಹಾ ಸಂದರ್ಭಗಳಲ್ಲಿ ಕೂಡಾ ಅವರವರ ಭಾವನೆಗಳು ಹೇಗಿರುತ್ತವೆ? ಅವರವರ ಕಷ್ಟ-ಸುಖಗಳ ಅನುಭವ ಎಂಥಾದ್ದು? ಎನ್ನುವುದನ್ನು ಅರ್ಥಮಾಡಿಕೊಂಡು ಓದುಗರಿಗೂ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಬರಹದಲ್ಲಿ ಮೂಡಿಸಲು ಶಕ್ತನಾಗುವ ಬರಹಗಾರ ಓದುಗರ ಮನ ಗೆಲ್ಲುತ್ತಾನೆ.
    ಹಾಗೆ ಕಳೆದ ಕಾಲದ ಕೆಲವು ಸಂಗತಿಗಳನ್ನು ಅಗತ್ಯಕ್ಕೆ ತಕ್ಕ ಬದಲಾವಣೆಗಳೊಂದಿಗೆ ಪರಿಣಾಮಕಾರಿಯಾಗಿ ದಾಖಲಿಸಲು ಇಲ್ಲಿ ಯತ್ನಿಸಿದ್ದೇನೆ. ಓದುಗರ ಮನ ಮುಟ್ಟಿದರೆ ಧನ್ಯತೆಯ ಭಾವ ನನ್ನದು. ಮಲೆನಾಡಿನ ರೋಚಕ ಕತೆಗಳ ಸರಣಿಗೆ, ಅಭೂತ ಪೂರ್ವ ಯಶಸ್ಸಿಗೆ, ರೋಚಕ ಮುನ್ನಡೆ ನೀಡಿ ಸಹಕರಿಸಿದ, ಸಹಕರಿಸುತ್ತಿರುವ ಎಲ್ಲರಿಗೂ ಈ ಕೃತಿ ಸಮರ್ಪಣೆ.
    ಇಂತೀ ನಿಮ್ಮವ
    ಗಿರಿಮನೆ ಶ್ಯಾಮರಾವ್

    Original price was: $2.16.Current price is: $1.30.
    Add to basket