• -40%

    ಮಲೆನಾಡಿನ ರೋಚಕ ಕತೆಗಳು

    0

    ಮಲೆನಾಡಿನ ರೋಚಕ ಕತೆಗಳು
    (ಸುಧಾ ಧಾರಾವಾಹಿ `ಕಾಫಿನಾಡಿನ ಕಿತ್ತಳೆ’ಯ ಪರಿಷ್ಕೃತ ಮುದ್ರಣ)
    ಶತಮಾನದಲ್ಲಿ ಇದ್ದಕ್ಕಿದ್ದಂತೆ ಚಿಗುರೊಡೆದು ದಿಕ್ಕು ದಿಕ್ಕುಗಳಲ್ಲಿ ಹರಡತೊಡಗಿತು. ಅದರಲ್ಲೂ ತೀರ ಇತ್ತೀಚಿನ ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ ನೆಟ್ ಗಳು ಕ್ರಾಂತಿಯನ್ನೇ ಮಾಡಿದವು. ನಮ್ಮ ಭೂಮಂಡಲದ ಒಳಗಿರುವ ದೇಶಗಳು ನಮಗೀಗ ನೆರೆಮನೆಗಳಾಗಿವೆ. ನಾವೀಗ ಇಪ್ಪತ್ತೊಂದನೆ ಶತಮಾನದ ಹೊಸ್ತಿಲಲ್ಲಿದ್ದೇವೆ. ನಾವು ಅಂದರೆ ಮಧ್ಯ ವಯಸ್ಸು ದಾಟಿದವರು ಕಳೆದ ಶತಮಾನದ ಮತ್ತು ಮುಂದಿನ ಆಧುನಿಕ ಜನಾಂಗದ ನಡುವಿನ ಕೊಂಡಿಗಳಾಗಿದ್ದೇವೆ. ಬಹಳಷ್ಟು ಹಳೆಯ ಸಂಗತಿಗಳು ನಮ್ಮೊಂದಿಗೇ ಅಳಿಸಿ ಹೋಗಲಿವೆ. ಏಕೆಂದರೆ ಈಗಿನ ಮಕ್ಕಳು ಮೊಬೈಲ್ ಮತ್ತು ಕಂಪ್ಯೂಟರುಗಳನ್ನು ಕೈಯಲ್ಲಿ ಹಿಡಿದೇ ಎಂಬಂತೆ ಜನ್ಮ ತಾಳುತ್ತಿದ್ದಾರೆ. ನಡೆದೇ ಶಾಲೆಗೆ ಹೋಗುವ, ಮನೆಗಳಿಗೆ ಹೋಗಿ ಸಂಗತಿ ತಿಳಿಸುವ, ಪತ್ರ ಮುಖೇನ ವಿಷಯ ರವಾನಿಸುವ, ಟೆಲಿಗ್ರಾಂ ಕಳಿಸುವ ಕಾಲವಿತ್ತು ಎನ್ನುವುದರ ಅರಿವೇ ಇಲ್ಲದಂತೆ ಬೆಳೆಯುತ್ತಿದ್ದಾರೆ ಈಗಿನ ಮಕ್ಕಳು. ಈಗೊಂದು ನಲವತ್ತು ವರ್ಷಗಳ ಹಿಂದಿನ ದಶಕದ ಕಾಲಘಟ್ಟದಲ್ಲಿ ಹೀಗೆಲ್ಲಾ ಇತ್ತು ಎಂದರೆ ನಂಬಲಾಗದ ಸ್ಥಿತಿ ಅವರದು! ಅಂಥವರಿಗೆ `ಮಲೆನಾಡು ಎಂದರೆ ಹೇಗಿರುತ್ತದೆ? ಆಗಿನ ನಮ್ಮ ಬದುಕು ಹೇಗಿತ್ತು? ಅದರೊಳಗೂ ಯಾವೆಲ್ಲಾ ರೋಚಕ ಸಂಗತಿಗಳಿರುತ್ತಿದ್ದವು ಎನ್ನುವುದು ತಿಳಿಯುವುದಾದರೂ ಹೇಗೆ?’ ಇದರಲ್ಲಿ ವಿವರಿಸಿದ ಘಟನೆಗಳ ಚಿತ್ರಣದಿಂದ ಅದರ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಬರಬಹುದು.

    Original price was: $1.56.Current price is: $0.94.
    Add to basket