• -40%

    ಮೊಗ್ಗಿನ ಮಾತು

    0

    ಮೊಗ್ಗಿನ ಮಾತು:

    ಶ್ರೀ ಪಳಕಳ ಸೀತಾರಾಮ ಭಟ್ಟರ ಸಮಗ್ರ ಕೃತಿಗಳ ಕುರಿತು ಅಧ್ಯಯನ ಮಾಡಿ ಬರೆದಿರುವ ಪುಸ್ತಕ ಈ `ಮೊಗ್ಗಿನ ಮಾತು’. ಒಂದನೆ ಅಧ್ಯಾಯದಲ್ಲಿ ಮಕ್ಕಳ ಸಾಹಿತ್ಯ ಎಂದರೇನು? ಎಂಬುವುದರ ಕುರಿತು ಚಿಂತನೆಯಿದೆ. ಎರಡನೆ ಅಧ್ಯಾಯದಲ್ಲಿ ಪಳಕಳರ ಬದುಕು ಹಾಗೂ ಬರಹಗಳ ಕುರಿತು ಚರ್ಚಿಸಲಾಗಿದೆ. ಅಧ್ಯಾಯ ಮೂರರಲ್ಲಿ ಪಳಕಳರ ಮಕ್ಕಳ ಕವನಗಳನ್ನು ಮನೋವೈಜ್ಞಾನಿಕ ಹಾಗೂ ಶೈಕ್ಷಣಿಕ ನೆಲೆಗಳಲ್ಲಿ ಅಧ್ಯಯನ ಮಾಡಲಾಗಿದೆ. ನಾಲ್ಕನೆ ಅಧ್ಯಾಯದಲ್ಲಿ ಪಳಕಳರ ಮಕ್ಕಳ ಕಥೆಗಳ ಕಾಲ್ಪನಿಕ ಹಾಗೂ ವಾಸ್ತವವಾದಿ ನೆಲೆಗಳನ್ನು ಪಂಜೆ ಮಂಗೇಶರಾಯರ ಕಥೆಗಳೊಂದಿಗೆ ಇಟ್ಟು ತೌಲನಿಕವಾಗಿ ಅಧ್ಯಯನ ಮಾಡಲಾಗಿದೆ. ಐದನೆ ಅಧ್ಯಾಯದಲ್ಲಿ ಮಕ್ಕಳ ಹಾಗೂ ಹೆತ್ತವರ ಅಭಿಪ್ರಾಯಗಳ ಸಂಗ್ರಹದ ಮೂಲಕ ಪಳಕಳರ ಕಥೆಗಳ ಹಾಗೂ ಕವನಗಳ ಪ್ರಾಯೋಗಿಕ ಅಧ್ಯಯನ ನಡೆಸಲಾಗಿದೆ. ಆರನೆ ಅಧ್ಯಾಯದಲ್ಲಿ `ಮಕ್ಕಳ ನಾಟಕ’ ಎಂದರೇನು? ಅವುಗಳಿಂದ ಮಕ್ಕಳಿಗೇನು ಪ್ರಯೋಜನ? ಮಕ್ಕಳ ನಾಟಕ ಹಾಗೂ ಪ್ರೌಢನಾಟಕ ಎಂಬ ಪ್ರತ್ಯೇಕ ವಿಭಾಗದ ಅಗತ್ಯವಿದೆಯೆ? ಎಂಬುದನ್ನು ಅನುಭವಿ ರಂಗಕರ್ಮಿಗಳ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿದೆ.  ಏಳನೆಯ ಅಧ್ಯಾಯದಲ್ಲಿ ಪಳಕಳರ ಪ್ರೌಢಕೃತಿಗಳಾದ ಭಾವಗೀತೆಗಳು, ಚುಟುಕಗಳು ಹಾಗೂ ಕೀರ್ತನ ಕುಸುಮ ಕೃತಿಗಳ ಕುರಿತು ಚರ್ಚಿಸಲಾಗಿದೆ. ಕೊನೆಯ ಅಧ್ಯಾಯದಲ್ಲಿ ಪಳಕಳರ ಕೃತಿಗಳ ಸಮೀಕ್ಷೆಯ ಒಟ್ಟು ನೋಟವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.

    Original price was: $4.20.Current price is: $2.52.
    Add to basket